alex Certify ಈ 3 ಹಂತದಲ್ಲಿ ಬೇವನ್ನು ಬಳಸುವ ಮೂಲಕ ಮುಖದ ಸೌಂದರ್ಯ ಹೆಚ್ಚಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ 3 ಹಂತದಲ್ಲಿ ಬೇವನ್ನು ಬಳಸುವ ಮೂಲಕ ಮುಖದ ಸೌಂದರ್ಯ ಹೆಚ್ಚಿಸಿ

ಬೇವು ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದೆ. ಇದು ಯಾವುದೇ ರೀತಿಯ ವೈರಸ್, ಸೂಕ್ಷ್ಮಾಣು ಜೀವಿಗಳನ್ನು ನಾಶ ಮಾಡುವಂತಹ ಶಕ್ತಿಯನ್ನು ಹೊಂದಿದೆ. ಹಾಗಾಗಿ ಇದನ್ನು ಸೌಂದರ್ಯ ಚಿಕಿತ್ಸೆಯಲ್ಲಿ ಬಳಸುತ್ತಾರೆ. ಈ ಬೇವನ್ನು 3 ಹಂತದಲ್ಲಿ ಬಳಸುವ ಮೂಲಕ ಮುಖದಲ್ಲಿ ಮೂಡಿರುವ ಮೊಡವೆಗಳನ್ನು ನಿವಾರಿಸಬಹುದು.

1.ಬೇವಿನ ಟೋನರ್ : 15 ಬೇವಿನ ಎಲೆಗಳನ್ನು 1 ½ ಕಪ್ ನೀರಿನಲ್ಲಿ ಅರ್ಧದಷ್ಟು ಬರುವ ತನಕ ಕುದಿಸಿ ತಣ್ಣಗಾಗಿಸಿ ಅದರಿಂದ ಮುಖವನ್ನು ಸ್ವಚ್ಛ ಮಾಡಿ. ಇದು ಗುಳ್ಳೆಗಳು, ಬ್ಯಾಕ್ಟೀರಿಯಾ ಸೋಂಕುಗಳನ್ನು ಕಡಿಮೆ ಮಾಡುತ್ತದೆ.

2.ಬೇವಿನ ಫೇಸ್ ಪ್ಯಾಕ್ : 15 ಬೇವಿನ ಎಲೆಗಳನ್ನು ತೊಳೆದು ಪೇಸ್ಟ್ ತಯಾರಿಸಿ ಅದಕ್ಕೆ 1 ಚಮಚ ರೋಸ್ ವಾಟರ್ ಅಥವಾ ಜೇನುತುಪ್ಪವನ್ನು ಬೆರೆಸಿ ಮುಖಕ್ಕೆ ಹಚ್ಚಿ 30 ನಿಮಿಷದ ನಂತರ ಮುಖವನ್ನು ವಾಶ್ ಮಾಡಿ.

3.ಬೇವಿನ ಕ್ರಿಂ : ಬೇವಿನ ರಸ ತೆಗೆದು ಅದಕ್ಕೆ 1 ಚಮಚ ಕಾರ್ನ್ ಫ್ಲೋರ್ ಸೇರಿಸಿ ಡಬಲ್ ಬಾಯ್ಲರ್ ನಲ್ಲಿ ಬಿಸಿ ಮಾಡಿ ಅದು ದಪ್ಪವಾಗುತ್ತಿದ್ದಂತೆ ಅದಕ್ಕೆ 1 ಚಮಚ ಅಲೋವೆರಾ ಜೆಲ್ ಸೇರಿಸಿ ಮಿಕ್ಸ್ ಮಾಡಿ ಕೊನೆಯಲ್ಲಿ ½ ಚಮಚ ಗ್ಲಿಸರಿನ್, 2 ವಿಟಮಿನ್ ಇ ಕ್ಯಾಪ್ಸುಲ್ ಸೇರಿಸಿ ಮಿಕ್ಸ್ ಮಾಡಿ ಫ್ರಿಜ್ ನಲ್ಲಿಡಿ. ಇದನ್ನು ರಾತ್ರಿ ಮುಖಕ್ಕೆ ಹಚ್ಚಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...