ಮನೆಯಲ್ಲಿರುವ ಪುದೀನಾ ಎಲೆಗಳಿಂದ ಆರೋಗ್ಯ ಹಾಗೂ ಸೌಂದರ್ಯ ವೃದ್ಧಿ ಮಾಡಿಕೊಳ್ಳಬಹುದು.
ಪುದೀನಾ ಆಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ ಎ ಹೊಂದಿದೆ. ಇದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಪುದೀನದಲ್ಲಿರುವ ಆಂಟಿಆಕ್ಸಿಡೆಂಟ್ ಚರ್ಮದ ಟೋನ್ ಸುಧಾರಿಸಲು ಸಹಾಯ ಮಾಡುತ್ತದೆ. ಕಪ್ಪು ಕಲೆಗಳನ್ನು ತೆಗೆದು ಹಾಕುತ್ತದೆ.
ಮುಖದ ಕೊಳೆಯನ್ನು ತೆಗೆದು ಹಾಕಲು ಪುದೀನ ಮಾಸ್ಕ್ ಹಾಕಿಕೊಳ್ಳಿ. ಇದಕ್ಕಾಗಿ ಅಡುಗೆ ಮನೆಯಲ್ಲೇ ಇರುವ ಸಾಮಗ್ರಿಗಳು ಸಾಕು. ಮನೆಯಲ್ಲಿ ಪುದೀನ ಮಾಸ್ಕ ತಯಾರಿಸಲು, ಪುದೀನ ಎಲೆಗಳು, ಸೌತೆಕಾಯಿ ಮತ್ತು ಮುಲ್ತಾನಿಯನ್ನು ಒಂದು ಪಾತ್ರೆಯಲ್ಲಿ ಪುಡಿಮಾಡಿ ಪೇಸ್ಟ್ ಮಾಡಿ. ಐದು ನಿಮಿಷ ಹಾಗೇ ಇಡಿ.
ಚರ್ಮದಲ್ಲಿನ ಜಿಡ್ಡಿನಂಶವನ್ನು ತೆಗೆದು ಹಾಕಲು ಮುಲ್ತಾನಿ ಮಿಟ್ಟಿ ಬಳಸಲಾಗುತ್ತದೆ. ನಂತರ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ. ಪೇಸ್ಟ್ ಒಣಗಿದ ನಂತರ ಮುಖವನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ.
ಮುಖಕ್ಕೆ ಮುಲ್ತಾನಿ ಮಿಟ್ಟಿ ಮತ್ತು ಸೌತೆಕಾಯಿಯನ್ನು ಹಚ್ಚಲು ಇಷ್ಟಪಡದವರು ರೋಸ್ ವಾಟರ್ ಮತ್ತು ಜೇನುತುಪ್ಪದೊಂದಿಗೆ ಪುದೀನ ಎಲೆಗಳನ್ನು ಬಳಸಬಹುದು. ಪುದೀನ ಎಲೆಗಳನ್ನು ಪುಡಿಮಾಡಿ ಅದಕ್ಕೆ ಸ್ವಲ್ಪ ರೋಸ್ ವಾಟರ್ ಮತ್ತು ಜೇನುತುಪ್ಪ ಹಾಕಿ ಚೆನ್ನಾಗಿ ಮಿಕ್ಸ ಮಾಡಿ. ಪೇಸ್ಟ್ ಮುಖಕ್ಕೆ ಹಚ್ಚಿ. ಹೀಗೆ ಮಾಡುವುದರಿಂದ ಕೆಲವೇ ದಿನಗಳಲ್ಲಿ ಮುಖ ಕಾಂತಿಯುಕ್ತವಾಗುವುದು.