ಶಾಲೆಯಲ್ಲಿ ಜಗಳವಾಡಿಕೊಂಡ ಚಿಣ್ಣರಿಬ್ಬರು ನಡೆದ ಘಟನೆಯನ್ನು ಇಂಗ್ಲಿಷ್ ನಲ್ಲಿ ಶಿಕ್ಷಕರಿಗೆ ವಿವರಿಸುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶಾಲೆಯಲ್ಲಿ ಸಹಪಾಠಿಯೊಂದಿಗೆ ಜಗಳವಾಡಿದ್ದನ್ನು ಪ್ರಾಂಶುಪಾಲರ ಕಚೇರಿಗೆ ಹೋಗಿ ಇಂಗ್ಲಿಷ್ ನಲ್ಲಿ ತಿಳಿಸಲು ಮಕ್ಕಳು ಪರದಾಡಿದ್ದು, ತಮಗೆ ಬಂದ ಇಂಗ್ಲಿಷ್ ನಲ್ಲಿಯೇ ನಡೆದ ಘಟನೆ ವಿವರಿಸುವ ಪ್ರಯತ್ನ ಮಾಡಿದ್ದಾರೆ.
ಅಸ್ಸಾಂನ ಪಚಿಮ್ ನಾಗಾನ್‌ನಲ್ಲಿರುವ ನ್ಯೂ ಲೈಫ್ ಹೈಸ್ಕೂಲ್ ತನ್ನ ಫೇಸ್‌ಬುಕ್ ಪುಟದಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದೆ. ಹುಡುಗರು ಪರಸ್ಪರ ಜಗಳವಾಡುತ್ತಿದ್ದರು ಅವರನ್ನು ಪ್ರಾಂಶುಪಾಲರು ಕರೆದು ಮಾಹಿತಿ ಕೇಳಿದ್ದಾರೆ. ಇಂಗ್ಲಿಷ್ ನಲ್ಲಿ ಮಾತ್ರ ಮಾತನಾಡಲು ಸೂಚಿಸಿದ್ದರಿಂದ ಅವರು ಪದಗಳಿಗಾಗಿ ಹರಸಾಹಸಪಟ್ಟಿದ್ದಾರೆ. ತಮ್ಮ ಹಾವಭಾವಗಳನ್ನು ಬಳಸಿಕೊಂಡು ತಮ್ಮ ವಿಚಾರವನ್ನು ಅರ್ಥ ಮಾಡಿಕೊಡುತ್ತಾರೆ.
ಹೇಳಿ, ಏನಾಯಿತು ಎಂದು ಶಿಕ್ಷಕ ಕೇಳಿದಾಗ. ಹುಡುಗರು ಮೂಕವಿಸ್ಮಿತರಾಗಿ ಮೊದಮೊದಲು ಮಾತನಾಡಲು ಸಾಧ್ಯವಾಗಲದೇ ಗೊಣಗುತ್ತಾರೆ. ನಂತರ, ಆದಿಲ್ ಎಂಬ ಬಾಲಕ ತನ್ನ ಕುತ್ತಿಗೆಯನ್ನು ಹಿಡಿದಿದ್ದಾನೆ ಎಂದು ಉದೀಪ್ ಎಂಬ ಹುಡುಗ ವಿವರಿಸಲು ಪ್ರಯತ್ನಿಸಿದ್ದಾನೆ. ಕುತ್ತಿಗೆ ಹಿಡಿದು ಈ ರೀತಿ ಮಾಡಿದ್ದಾನೆ ಎಂದು ಹೇಳಿದ್ದಾನೆ. ಸನ್ನೆಯ ಮೂಲಕ ಇದನ್ನು ವಿವರಿಸಿದ್ದು, ತನಗೆ ಉದೀಪ್ ಗುದ್ದಿದ್ದಾನೆ ಎಂದು ಆದಿಲ್ ವಿವರಿಸಲು ಗುದ್ದುವ ರೀತಿ ತೋರಿಸಿದ್ದಾನೆ.
ನಂತರ ಮತ್ತೆ ಜಗಳವಾಡಿದರೆ ಪೊಲೀಸರಿಗೆ ಕರೆ ಮಾಡಿ ಜೈಲಿಗೆ ಹೋಗುವುದಾಗಿ ಶಿಕ್ಷಕರು ಎಚ್ಚರಿಸಿದ್ದಾರೆ. ಒಬ್ಬರಿಗೊಬ್ಬರು ಕ್ಷಮಿಸಿ ಮತ್ತು ಪರಸ್ಪರ ಕೈಕುಲುಕಲು ಅವರು ಹೇಳಿ ಕಳಿಸಿದ್ದಾರೆ.
ಈ ವಿಡಿಯೋ ನೋಡಿದ ನೆಟ್ಟಿಗರು ಮಗು ಮಾತೃಭಾಷೆಯಲ್ಲಿ ಸಂವಹನವನ್ನು ಪ್ರಾರಂಭಿಸಲಿ… ಇಂತಹ ಕಠಿಣ ನಿಯಮಗಳು ಮಗುವನ್ನು ಇಂಗ್ಲಿಷ್ ಮಾತನಾಡಲು ಕಲಿಯುವಂತೆ ಮಾಡುವುದಿಲ್ಲ.. ಇಂಗ್ಲಿಷ್ ಸಂವಹನ ವಿಧಾನದ ಮೇಲೆ ಉತ್ತಮ ಒತ್ತಡ ಎಂದು ಕಾಮೆಂಟ್ ಮಾಡಿದ್ದಾರೆ. ಅವರ ಕ್ರಿಯೆಗಳು ಅವರ ಮಾತುಗಳಿಗಿಂತ ಜೋರಾಗಿ ಮಾತನಾಡುತ್ತವೆ ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ.