ಲಂಡನ್: 2020ರ ಯುರೋ ಕಪ್ ಮುಕ್ತಾಯಗೊಂಡಿದ್ದು, ಅತ್ಯುತ್ತಮ ಫುಟ್ಬಾಲ್ ತಂಡ ಯಾವುದು ಎಂಬ ಬಗ್ಗೆ ಚರ್ಚೆ ಮುಗಿದಿರಬಹುದು. ಆದರೆ, ಈ ಮಧ್ಯೆ ಪಿಜ್ಜಾ ಖಾದ್ಯದ ಜೋಕ್ಸ್ ಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಗುಲ್ಲೆಬ್ಬಿಸಿದೆ.
ಇಂಗ್ಲೆಂಡ್ ಮತ್ತು ಇಟಲಿ ತಂಡ ಫೈನಲ್ ಗೆ ಅರ್ಹತೆ ಪಡೆದ ನಂತರ ಮೀನು ಹಾಗೂ ಚಿಪ್ಸ್ & ಪಿಜ್ಜಾ ಜೋಕ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಶುರು ಮಾಡಿದ್ದು, ಈಗಲೂ ಸಖತ್ ಟ್ರೆಂಡಿಗ್ ನಲ್ಲಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಭಾರಿ ಚರ್ಚೆಗಳು ನಡೆದಿವೆ. ಪಿಜ್ಜಾಗೆ ಅನಾನಸು ಸೇರಿಸಬೇಡಿ. ಮೀನುಗಳನ್ನು ಚಿಪ್ಸ್ ಅಥವಾ ಪಾಸ್ತಾಗೆ ಹಾಕಲು ಸಾಧ್ಯವಿಲ್ಲ ಎಂದೆಲ್ಲಾ ಉತ್ತರಿಸಿದ್ದರು.
1983 ರ ವಿಶ್ವಕಪ್ ವಿಜೇತ ತಂಡದಲ್ಲಿದ್ದ ಯಶ್ ಪಾಲ್ ಶರ್ಮಾ ಇನ್ನಿಲ್ಲ
ಅಂತಿಮ ಪಂದ್ಯದ ನಂತರ ಎರಡು ಗುಂಪುಗಳ ಅಭಿಮಾನಿಗಳನ್ನು ಒಂದು ಮಾಡಲು ಜಪಾನ್ ಡೊಮಿನೊಸ್, ಮೀನು ಮತ್ತು ಚಿಪ್ಸ್ ಪಿಜ್ಜಾ ಖಾದ್ಯವನ್ನು ತಯಾರಿಸಿದೆ. ಅದರ ಮೇಲೆ ಆಲೂಗಡ್ಡೆ, ತುಳಸಿ, ನಿಂಬೆ, ಟೊಮೆಟೋ ಸಾಸ್ ಹಾಕಲಾಗಿದೆ. ವರದಿಗಳ ಪ್ರಕಾರ ಜಪಾನ್ ನಲ್ಲಿ ಈ ಖಾದ್ಯಕ್ಕೆ 4,200 ಯೆನ್ ಗಳ ಬೆಲೆಯಿದೆ.
ಇನ್ನು ಮಾರ್ಕ್ ಇವಾನ್ಸ್ ಎಂಬಾತ ಪಿಜ್ಜಾದ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದು, ‘‘ಜಪಾನ್ ಡೊಮಿನೋಸ್ ಇಂಗ್ಲೆಂಡ್ ಮತ್ತು ಇಟಲಿ ಎರಡೂ ದೇಶವನ್ನು ಅವಮಾನಿಸುವ ಖಾದ್ಯ ತಯಾರಿಸಿದೆ’’ ಎಂದಿದ್ದಾರೆ. ಇನ್ನು ಈ ಪೋಸ್ಟ್ ವಿಭಿನ್ನ ರೀತಿಯಲ್ಲಿ ಹಲವರು ಪ್ರತಿಕ್ರಿಯಿಸಿದ್ದಾರೆ. ಜಪಾನ್ ಡೊಮಿನೋಸ್ ರೀಟ್ವೀಟ್ ಮಾಡಿದ್ದು, ಕ್ಷಮೆ ಕೇಳಿದೆ. ‘ಇದು ತುಂಬಾ ರುಚಿಕರವಾಗಿದೆ ಎಂದು ಭಾವಿಸಿದ್ದೆವುʼ ಎಂದು ತೊಂದರೆ ಉಂಟು ಮಾಡಿದ್ದಕ್ಕೆ ಕ್ಷಮೆ ಕೇಳಿದೆ.