
ಸಾಮಾನ್ಯವಾಗಿ ʼದಿ ಪಾಯ್ಸನ್ ಗಾರ್ಡನ್ʼ ಎಂದು ಕರೆಯಲ್ಪಡುವ ವಿಶ್ವದ ಅತ್ಯಂತ ಮಾರಣಾಂತಿಕ ಉದ್ಯಾನವು 100 ಕ್ಕೂ ಹೆಚ್ಚು ವಿಧದ ವಿಷಕಾರಿ ಮತ್ತು ಮಾದಕ ಸಸ್ಯಗಳಿಗೆ ನೆಲೆಯಾಗಿದೆ.
ಇತ್ತೀಚಿನ ವರದಿಯ ಪ್ರಕಾರ, ನಾರ್ತಂಬರ್‌ಲ್ಯಾಂಡ್‌ನ ಡಚ್ಚಸ್, ಜೇನ್ ಪರ್ಸಿ ಅವರು 2005ರಲ್ಲಿ ಉದ್ಯಾನವನ್ನು ರೂಪಿಸಿದರು. ಉದ್ಯಾನದ ಅಧಿಕೃತ ವೆಬ್‌ಸೈಟ್ ವಾರ್ಷಿಕವಾಗಿ ಸುಮಾರು 600,000 ಸಂದರ್ಶಕರು ಉದ್ಯಾನಗಳನ್ನು ನೋಡಲು ಬರುತ್ತಾರೆ ಮತ್ತು ಮಾರ್ಗದರ್ಶಿ ಪ್ರವಾಸಗಳ ಮೂಲಕ ಮಾತ್ರ ಅದನ್ನು ಪ್ರವೇಶಿಸಲು ಅನುಮತಿಸಲಾಗಿದೆ ಎಂದು ಹೇಳುತ್ತದೆ.
ಸಂದರ್ಶಕರಿಗೆ ನೀಡಲಾದ ಅತ್ಯಂತ ನಿರ್ಣಾಯಕ ಎಚ್ಚರಿಕೆಯೆಂದರೆ ಯಾವುದೇ ಸಸ್ಯಗಳನ್ನು ಸ್ಪರ್ಶಿಸುವುದು, ವಾಸನೆ ಮಾಡುವುದು ಅಥವಾ ರುಚಿ ನೋಡುವುದು ನಿಷಿದ್ಧ. ಆದರೆ, ಈ ಮಾರಣಾಂತಿಕ ಸಸ್ಯಗಳ ವಿಷಕಾರಿ ಗಾಳಿಯನ್ನು ಸೇವಿಸಿ ಯಾರಾದರೂ ಮೂರ್ಛೆ ಹೋಗುವಂಥ ಘಟನೆಗಳು ಪದೇ ಪದೇ ಸಂಭವಿಸುತ್ತಿರುತ್ತದಂತೆ.
ಸಂದರ್ಶಕರ ಹೊರತಾಗಿ, ಈ ವಿಶಿಷ್ಟ ಸ್ಥಳವು ಹಲವಾರು ಸಸ್ಯಶಾಸ್ತ್ರದ ಉತ್ಸಾಹಿಗಳಿಂದ ಕೂಡ ಅಲಂಕರಿಸಲ್ಪಟ್ಟಿದೆ. ಮಾಂಕ್ಸ್‌ಹುಡ್, ರೋಡೋಡೆಂಡ್ರಾನ್‌ಗಳು ಮತ್ತು ವುಲ್ಫ್ಸ್ ಬೇನ್‌ನಂತಹ ಕೆಲವು ಅತ್ಯಂತ ವಿಷಕಾರಿ ಸಸ್ಯಗಳನ್ನು ನೋಡಲು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಉದ್ಯಾನದಲ್ಲಿ ಕ್ಯಾಸ್ಟರ್ ಬೀನ್ ಅಥವಾ ಕ್ಯಾಸ್ಟರ್ ಆಯಿಲ್ ಸಸ್ಯ ಎಂದೂ ಕರೆಯಲ್ಪಡುವ ರಿಸಿನ್ ಸಸ್ಯ ಕೂಡ ಇದೆ. ಇದು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ ವಿಶ್ವದ ಅತ್ಯಂತ ವಿಷಕಾರಿ ಸಸ್ಯವಾಗಿದೆ.
ವಿಷಕಾರಿಯಾಗಿದ್ದರೂ, ಉದ್ಯಾನದಲ್ಲಿರುವ ಹಲವಾರು ಸಸ್ಯಗಳನ್ನು ಕೆಲವು ಚಿಕಿತ್ಸೆ ನೀಡಲಾಗದ ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ ಎಂದು ವರದಿಯಾಗಿದೆ. ಟ್ಯಾಕ್ಸಿನ್ ಎಂಬ ವಿಷಕಾರಿ ಸಸ್ಯಕ್ಕೆ ಕೇವಲ 20 ನಿಮಿಷಗಳಲ್ಲಿ ಕೊಲ್ಲುವಷ್ಟು ಶಕ್ತಿಯಿದೆ. ಇದು ಟ್ಯಾಕ್ಸೋಲ್ ಅನ್ನು ಉತ್ಪಾದಿಸುತ್ತದೆ. ಬಹಳಷ್ಟು ವಿಷಕಾರಿಯಾಗಿದ್ದರೂ ಇದನ್ನು ಔಷಧಕ್ಕೆ ಬಳಸಲಾಗುತ್ತದೆ ಮತ್ತು ಸ್ತನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಅತ್ಯಂತ ಸಹಾಯಕವಾಗಿದೆ.
https://twitter.com/SusmitaUkil/status/1365190845519958018?ref_src=twsrc%5Etfw%7Ctwcamp%5Etweetembed%7Ctwterm%5E1365190845519958018%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fenglands-deadly-poison-garden-forbids-you-from-touching-smelling-or-tasting-any-plants-5492773.html