ಬೆಳ್ಳಂಬೆಳಿಗ್ಗೆ ಸಾಮಾನ್ಯವಾಗಿ ಎಲ್ಲರೂ ದೇವರನ್ನು ಪ್ರಾರ್ಥಿಸಿ ಏಳ್ತಾರೆ. ಎದ್ದ ತಕ್ಷಣ ಟಾಯ್ಲೆಟ್ ಗೆ ಹೋಗುವ ಅಭ್ಯಾಸ ಬಹುತೇಕರಿಗಿರುತ್ತದೆ. ಟಾಯ್ಲೆಟ್ ಗೆ ಕಣ್ಣುಜ್ಜುತ್ತ ಹೋದಾಗ, ನಿರೀಕ್ಷೆ ಮಾಡದ ವಸ್ತು ಕಂಡ್ರೆ ಏನಾಗಬೇಡ. ಇಂಗ್ಲೆಂಡ್‌ನ ಸ್ಟೋರ್‌ಬ್ರಿಡ್ಜ್ ನಲ್ಲಿ ವಾಸಿಸುತ್ತಿರುವ ಲಾರಾ ಟ್ರಾಂಟರ್ ಕೂಡ ಟಾಯ್ಲೆಟ್ ನೋಡಿ ದಂಗಾಗಿದ್ದಾಳೆ.
ಪ್ರತಿ ತಿಂಗಳು ಹಣ ಸಿಗಬೇಕೆಂದ್ರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿ
ಬೆಳಗಿನ ಜಾವ 5 ಗಂಟೆ ಸುಮಾರಿಗೆ ಲಾರಾ, ಟಾಯ್ಲೆಟ್ ಗೆ ಹೋಗಿದ್ದಾಳೆ. ಕಮೋಡ್ ನಲ್ಲಿ ಹೆಬ್ಬಾವು ಕಾಣಿಸಿದೆ. ಭಯಗೊಂಡ ಲಾರಾ, ಅಲ್ಲಿಂದ ಓಡಿದ್ದಾಳೆ. ಸ್ನೇಹಿತರಿಗೆ ಕರೆ ಮಾಡಿ ವಿಷ್ಯ ತಿಳಿಸಿದ್ದಾಳೆ. ಆದ್ರೆ ಸ್ನೇಹಿತರು ಲಾರಾ ಮಾತನ್ನು ಒಪ್ಪಲ್ಲಿಲ್ಲ. ಲಾರಾ ಕುಡಿದಿದ್ದಾಳೆಂದು ಭಾವಿಸಿದ್ದರು.
ಲಾರಾ, ಸಹೋದರನಿಗೆ ಕರೆ ಮಾಡಿದ್ದಾಳೆ. ಲಾರಾ ಸಹೋದರ ಅಲ್ಲಿಗೆ ಬಂದಿದ್ದಾನೆ. ಟಾಯ್ಲೆಟ್ ನಲ್ಲಿ ಇರುವ ಹೆಬ್ಬಾವನ್ನು ರಕ್ಷಿಸುವ ಪ್ರಯತ್ನ ಮಾಡಿದ್ದಾನೆ. ಕಮೋಡ್ ನಲ್ಲಿ ಹೆಬ್ಬಾವು ಸಿಕ್ಕಿಬಿದ್ದಿದ್ದರಿಂದ ಸ್ವಲ್ಪ ಕಷ್ಟವಾಗಿದೆ. ಟಾಯ್ಲೆಟ್ ಗೆ ನೀರು ಹಾಕಿ ನಂತ್ರ ರಕ್ಷಿಸಿದ್ದಾನೆ. ಇದು ಸಾಕಿರುವ ಹೆಬ್ಬಾವೆಂದು ಲಾರಾ ಸಹೋದರ ಡಾನ್ ಹೇಳಿದ್ದಾನೆ. ಹೆಬ್ಬಾವಿನ ಮಾಲಿಕರ ಬಗ್ಗೆ ಯಾವುದೇ ಮಾಹಿತಿ ಸಿಗದ ಕಾರಣ ಹೆಬ್ಬಾವನ್ನು ಆರ್ಎಸ್ಪಿಸಿಎಗೆ ನೀಡಲಾಗಿದೆ.