alex Certify ಏಟಿಗೆ ತಿರುಗೇಟು: ಇಂಗ್ಲೆಂಡ್​ ವಿರುದ್ಧ ಪಾಕಿಸ್ತಾನಕ್ಕೆ ಹೀನಾಯ ಸೋಲು- ಜಾಲತಾಣದಲ್ಲಿ ಶುರುವಾಯ್ತು ಭಾರಿ ಟ್ರೋಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏಟಿಗೆ ತಿರುಗೇಟು: ಇಂಗ್ಲೆಂಡ್​ ವಿರುದ್ಧ ಪಾಕಿಸ್ತಾನಕ್ಕೆ ಹೀನಾಯ ಸೋಲು- ಜಾಲತಾಣದಲ್ಲಿ ಶುರುವಾಯ್ತು ಭಾರಿ ಟ್ರೋಲ್​

ಮೆಲ್ಬೋರ್ನ್​: ಮೆಲ್ಬೋರ್ನ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡ ಪಾಕಿಸ್ತಾನವನ್ನು ಸೋಲಿಸಿ ವಿಶ್ವ ಚಾಂಪಿಯನ್ ಆಯಿತು. 138 ರನ್‌ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಇಂಗ್ಲೆಂಡ್ 19 ಓವರ್‌ಗಳಲ್ಲಿ ಗುರಿ ತಲುಪಿ ಚಾಂಪಿಯನ್ ಆಯಿತು. ಬೆನ್ ಸ್ಟೋಕ್ಸ್ (49 ಎಸೆತಗಳಲ್ಲಿ ಔಟಾಗದೆ 52; 5 ಬೌಂಡರಿ, 1 ಸಿಕ್ಸರ್) ಸೂಪರ್ ಇನ್ನಿಂಗ್ಸ್‌ನೊಂದಿಗೆ ಇಂಗ್ಲೆಂಡ್ ಮತ್ತೊಮ್ಮೆ ಚಾಂಪಿಯನ್ ಆಯಿತು.

ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 20 ಓವರ್ ಗಳಲ್ಲಿ 137 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ಬೆನ್ ಸ್ಟೋಕ್ಸ್ ಅರ್ಧಶತಕದ ನೆರವಿನಿಂದ 5 ವಿಕೆಟ್ ಕಳೆದುಕೊಂಡು 19 ಓವರ್ ಗಳಲ್ಲಿ ಗುರಿ ತಲುಪಿ ಇತಿಹಾಸ ಬರೆಯಿತು.

ಹೀಗಾಗಿ ಏಕದಿನ ವಿಶ್ವಕಪ್ ಹಾಗೂ ಟಿ20 ವಿಶ್ವಕಪ್‌ನಲ್ಲಿ ಸತತ ಗೆಲುವು ಸಾಧಿಸುವ ಮೂಲಕ ತಂಡ ಇತಿಹಾಸ ಸೃಷ್ಟಿಸಿದೆ. ಅಲ್ಲದೆ, 1992ರಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾದಾಗ ಪಾಕಿಸ್ತಾನ ತಂಡವು ಗೆದ್ದಿತ್ತು. ಇಷ್ಟಾಗುತ್ತಿದ್ದಂತೆಯೇ ಈಗ ಜಾಲತಾಣದಲ್ಲಿ ಟ್ರೋಲ್​ಗಳ ಸುರಿಮಳೆ ಶುರುವಾಗಿದೆ.

ಇಂಗ್ಲೆಂಡ್​ ವಿರುದ್ಧ ಭಾರತ ಸೋತಾಗ ಪಾಕಿಗಳ ಭಾರಿ ಟೀಕೆ ಮಾಡುತ್ತಾ ಟ್ರೋಲ್​ ಮಾಡಿದ್ದರು. ಅದಕ್ಕೆ ಈಗ ತಿರುಗೇಟು ನೀಡಿರುವ ಭಾರತದ ಕ್ರಿಕೆಟ್​ ತಂಡ ಹಾಗೂ ಕ್ರಿಕೆಟ್ ಪ್ರೇಮಿಗಳು ಥಹರೇವಾರ ರೀತಿಯಲ್ಲಿ ಪಾಕಿಸ್ತಾನವನ್ನು ಟ್ರೋಲ್​ ಮಾಡುತ್ತಿದ್ದಾರೆ. ನಕ್ಕು ನಗಿಸುವಂಥ ವಿಡಿಯೋಗಳು ವೈರಲ್​ ಆಗುತ್ತಿವೆ. ​

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...