ಖ್ಯಾತ ಕ್ರಿಕೆಟಿಗ ಸ್ಟುವರ್ಟ್ ಬ್ರಾಡ್ ಅವರಿಗೆ ಸೇರಿದ ಪಬ್’ ಗೆ ಬೆಂಕಿ ತಗುಲಿ ಅಪಾರ ಹಾನಿಯಾಗಿದೆ. ಇಂಗ್ಲೆಂಡಿನ ಬ್ರಾಟನ್ ಈಸ್ಟ್ ಮಿಡ್ಲ್ಯಾಂಡ್ಸ್ ನಲ್ಲಿರುವ ಈ ಪಬ್ ಗೆ ಶನಿವಾರ ರಾತ್ರಿ ಬೆಂಕಿ ತಗುಲಿದೆ ಎನ್ನಲಾಗಿದೆ.
ಬೆಂಕಿಯನ್ನು ನಂದಿಸಲು 8 ಫೈರ್ ಇಂಜಿನ್ ಗಳು ಸ್ಥಳಕ್ಕಾಗಮಿಸಿದರೂ ಅಷ್ಟರಲ್ಲಾಗಲೇ ಪಬ್ ನ ಮೇಲ್ಚಾವಣಿ ಸೇರಿದಂತೆ ಬೆಲೆಬಾಳುವ ಪೀಠೋಪಕರಣಗಳು ಸುಟ್ಟು ಭಸ್ಮವಾಗಿವೆ ಎಂದು ಹೇಳಲಾಗಿದೆ.
ಸ್ಟುವರ್ಟ್ ಬ್ರಾಡ್ 2016ರಲ್ಲಿ ಕ್ಯಾಟ್ ಅಂಡ್ ವಿಕೆಟ್ಸ್ ಪಬ್ ಕಂಪನಿಯನ್ನು ಆರಂಭಿಸಿದ್ದು, ಇದಕ್ಕೆ ಇಂಗ್ಲೆಂಡಿನ ಮಾಜಿ ಆಟಗಾರ ಮತ್ತು ನಾಟಿಂಗ್ಹ್ಯಾಮ್ ಶೈರ್ ತಂಡದ ಸಹ ಆಟಗಾರ ಹ್ಯಾರಿ ಗುರ್ನಿ ಜೊತೆ ಸೇರಿ ಇದನ್ನು ಆರಂಭಿಸಿದ್ದರು.