ಲಂಡನ್: ಇಂಗ್ಲೆಂಡ್ ನಲ್ಲಿ ಬೂಸ್ಟರ್ ಲಸಿಕೆಗೆ ಬುಕಿಂಗ್ ಆರಂಭವಾಗಿದೆ. ಬುಕಿಂಗ್ ಆರಂಭವಾದ ಮೂರು ದಿನದಲ್ಲಿ 10 ಲಕ್ಷ ಜನರು ಲಸಿಕೆ ಪಡೆಯಲು ಬುಕಿಂಗ್ ಮಾಡಿಕೊಂಡಿದ್ದಾರೆ.
ಎರಡನೇ ಡೋಸ್ ಪಡೆದ ಬಳಿಕ ಬೂಸ್ಟರ್ ಡೋಸ್ ಪಡೆಯಬೇಕಿದೆ. ಸೆಕೆಂಡ್ ಡೋಸ್ ಪಡೆದ 5 ತಿಂಗಳ ನಂತರ ಬೂಸ್ಟರ್ ಡೋಸ್ ಪಡೆಯಬಹುದು ಎಂದು ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.
ಬ್ರಿಟನ್ ನಲ್ಲಿ ಇದುವರೆಗೆ 9 ಮಿಲಿಯನ್ ಗಿಂತಲೂ ಹೆಚ್ಚು ಜನರು ಬೂಸ್ಟರ್ ಡೋಸ್ ಪಡೆದುಕೊಂಡಿದ್ದಾರೆ. ಚಳಿಗಾಲದ ಸಂದರ್ಭದಲ್ಲಿ ಲಾಕ್ಡೌನ್ ತಪ್ಪಿಸುವ ಉದ್ದೇಶದಿಂದ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. 50 ವರ್ಷ ಮೇಲ್ಪಟ್ಟ ಐವರಲ್ಲಿ ಮೂವರು ಇಂಗ್ಲೆಂಡ್ ನಲ್ಲಿ ಬೂಸ್ಟರ್ ಡೋಸ್ ಪಡೆದಿದ್ದು, ಆದಷ್ಟು ಬೇಗನೆ ಅಭಿಯಾನ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಕೊರೋನಾದಿಂದ ಲಸಿಕೆ ರಕ್ಷಣೆ ನೀಡಲಿದೆ. ರೋಗನಿರೋಧಕ ಶಕ್ತಿಯು ಕಾಲಾನಂತರದಲ್ಲಿ ಕಡಿಮೆಯಾಗುತ್ತದೆ. ಈ ಕಾರಣದಿಂದ ಬೂಸ್ಟರ್ ಡೋಸ್ ಅಗತ್ಯವೆನ್ನಲಾಗಿದೆ.