ಮುಂಬೈ: ಎಸ್‌ವಿಕೆಎಂ ನ ಎನ್‌ಎಂಐಎಂಎಸ್ ಮುಕೇಶ್ ಪಟೇಲ್ ಸ್ಕೂಲ್ ಆಫ್ ಟೆಕ್ನಾಲಜಿ ಮ್ಯಾನೇಜ್‌ಮೆಂಟ್ ಆಂಡ್ ಇಂಜಿನಿಯರಿಂಗ್ (ಎಂಪಿಎಸ್‌ಟಿಎಂಇ)ನ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಇ- ಕಾಮರ್ಸ್ ದಿಗ್ಗಜ ಸಂಸ್ಥೆ ಅಮಜಾನ್ ಕಂಪನಿಯ ಡಬ್ಲಿನ್ ಕಚೇರಿಯಲ್ಲಿ 1.22 ಕೋಟಿ ರೂಪಾಯಿ ಪ್ಯಾಕೇಜ್‌ನ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ.
ಯೋಹಾನ್ ವಕಿಲ್ ಮತ್ತು ತನುಜ್ ಚನಿಯಾರಿ ಈ ರೀತಿ ಆಯ್ಕೆಯಾದ ವಿದ್ಯಾರ್ಥಿಗಳು. ಇಬ್ಬರೂ ಎಂಪಿಎಸ್‌ಟಿಎಂಇನಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್ ಬಿಟೆಕ್ ಮಾಡುತ್ತಿದ್ದು, ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಇಂಜಿನಿಯರ್‌ಗಳಾಗಿ ಐರ್ಲೆಂಡ್‌ನ ಡಬ್ಲಿನ್‌ನಲ್ಲಿರುವ ಅಮೆಜಾನ್ ಕಚೇರಿಯಲ್ಲಿ ಉದ್ಯೋಗಕ್ಕೆ ಸೇರಲಿದ್ದಾರೆ.
ಆನ್ ಲೈನ್ ಜೂಜಲ್ಲಿ ಹಣ ಕಳೆದುಕೊಂಡ ಮಹಿಳೆ ಆತ್ಮಹತ್ಯೆಗೆ ಶರಣು
ಫಾರ್ಚ್ಯೂನ್ 500 ಕಂಪನಿಗಳಲ್ಲಿ ಎರಡನೇ ಸ್ಥಾನ ಮತ್ತು ಜಾಗತಿಕವಾಗಿ ಅಗ್ರ ಐದು ಅತ್ಯುತ್ತಮ ಉದ್ಯೋಗದಾತರ ಪಟ್ಟಿಯಲ್ಲಿರುವ ಅಮೆಜಾನ್ ಕಂಪನಿಯ ಬೃಹತ್ ಕಂಪ್ಯೂಟಿಂಗ್ ಪರಿಸರದಲ್ಲಿ ನವೀನ ತಂತ್ರಜ್ಞಾನಗಳನ್ನು ವಿನ್ಯಾಸಗೊಳಿಸುವುದು, ನಿರ್ಮಿಸುವುದು ಹಾಗೂ ಅವುಗಳನ್ನು ಮುನ್ನಡೆಸಲು ನೆರವು ಒದಗಿಸುವ ಮಹತ್ತರ ಉದ್ಯೋಗಕ್ಕಾಗಿ ಈ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದೆ.
ಯೊಹಾನ್ ಮತ್ತು ತನುಜ್ ಅವರು ಉದ್ಯೋಗವನ್ನು ಭದ್ರಪಡಿಸಿಕೊಳ್ಳಲು ಸಾಫ್ಟ್ ಸ್ಕಿಲ್‌ಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಿದ್ದಾರೆ. ಸ್ಥಿರ ಅಧ್ಯಯನ, ಪಠ್ಯಕ್ರಮದ ಅನುಕರಣೆ, ಎಲ್ಲ ಕಲಿಕೆಯ ಅವಕಾಶಗಳ ಬಳಕೆ, ಮೃದು ಕೌಶಲ ಅಭ್ಯಾಸ ಈ ಉದ್ಯೋಗಕ್ಕೆ ಮುಖ್ಯ ಎಂದು ಯೋಹಾನ್ ಮತ್ತು ತನುಜ್ ಹೇಳಿದರು.