ನವದೆಹಲಿ: ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮುಖ್ಯ ಕೋರ್ಸ್ ಜೊತೆಗೆ ಇಂಜಿನಿಯರಿಂಗ್ ನ ಇತರ ಬ್ರಾಂಚ್ ಗಳಲ್ಲಿ ಪ್ರವೇಶ ಪಡೆಯಬಹುದು. ವಿದ್ಯಾರ್ಥಿಗಳಿಂದ ಸ್ವೀಕರಿಸಿದ ವಿನಂತಿಗಳ ಅನ್ವಯ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ(ಎಐಸಿಟಿಇ) ಲ್ಯಾಟರಲ್ ಎಂಟ್ರಿ ಮೂಲಕ ಹೆಚ್ಚುವರಿ ಬಿಟೆಕ್ ಕೋರ್ಸ್ ಪ್ರವೇಶಕ್ಕೆ ಅವಕಾಶ ನೀಡಲಿದೆ.
ಎಐಸಿಟಿಇ ಪ್ರಕಾರ, ಮಂಡಳಿಯ ಕಾರ್ಯಕಾರಿ ಸಮಿತಿಯ ಮುಂದೆ ಪ್ರಸ್ತಾವನೆ ಇರಿಸಲಾಗಿದೆ. ತಾಂತ್ರಿಕ ವಿಶ್ವವಿದ್ಯಾನಿಲಯಗಳು ಪ್ರವೇಶ ಬಯಸುವಂತಹ ವಿದ್ಯಾರ್ಥಿಗಳಿಗೆ ಬಿಟೆಕ್ /ಬಿಇಗೆ ಪ್ರವೇಶ ಪಡೆಯಲು ಅನುಕೂಲ ಕಲ್ಪಿಸಲಾಗುವುದು. ಬಿಟೆಕ್ ಇನ್ನೊಂದು ಹಂತದಲ್ಲಿ /ಎಂಜಿನಿಯರಿಂಗ್ ಶಾಖೆಯಲ್ಲಿ ಪ್ರವೇಶ ಪಡೆಯಲು ಅನುವು ಮಾಡಿಕೊಡುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ವಿದ್ಯಾರ್ಥಿಗಳು ತಾವು ಈಗಾಗಲೇ ಕಲಿತ ಕೋರ್ಸ್‌ಗಳನ್ನು ಮೊದಲ ವಿಭಾಗದಲ್ಲಿ ಪುನರಾವರ್ತಿಸಬೇಕಾಗಿಲ್ಲ. ಬಿಟೆಕ್ ಕಾರ್ಯಕ್ರಮದ ಮೊದಲ ವಿಭಾಗದಲ್ಲಿ ಈಗಾಗಲೇ ಮಾಡಲಾದ ಕೋರ್ಸ್‌ಗಳ ವಿನಾಯಿತಿಯನ್ನು ಕಾರ್ಯಕಾರಿ ಸಮಿತಿಯು ಅನುಮೋದಿಸಿದೆ. ಅಂತಹ ವಿದ್ಯಾರ್ಥಿಗಳು ಎರಡನೇ ವಿಭಾಗದ ಇತರ ಅವಶ್ಯಕತೆಗಳನ್ನು ಪೂರ್ಣಗೊಳಿಸಲು ಸೂಕ್ತವಾಗಿ ಮಾರ್ಗದರ್ಶನ ನೀಡಲಾಗುವುದು. ಪ್ರಾಯೋಗಿಕ ಅಂಶವು ಒಳಗೊಂಡಿರುವುದರಿಂದ ವಿದ್ಯಾರ್ಥಿಗಳು ನಿಯಮಿತ ವಿದ್ಯಾರ್ಥಿಯಾಗಿ ಸಂಸ್ಥೆ/ಕಾಲೇಜಿನಲ್ಲಿ ಪ್ರವೇಶ ಪಡೆಯಬೇಕಾಗುತ್ತದೆ. ಸಂಬಂಧಿತ ವಿಶ್ವವಿದ್ಯಾನಿಲಯವು ಇದನ್ನು ಖಚಿತಪಡಿಸುತ್ತದೆ. ಅದಕ್ಕೆ ಅನುಗುಣವಾಗಿ ನಿಬಂಧನೆಗಳನ್ನು ರೂಪಿಸಲಾಗುತ್ತದೆ ಎಂದು ಎಐಸಿಟಿಇ ಹೇಳಿದೆ.
ಸಂಸ್ಥೆಗಳು ತಮ್ಮ ಪ್ರವೇಶ ಪ್ರಕ್ರಿಯೆಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಲು ಮತ್ತು ಬಿಟೆಕ್ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಕೋರ್ಸ್‌ಗಳನ್ನು ಒದಗಿಸಲು ನಿರ್ದೇಶಿಸಲಾಗಿದೆ.