ನಿಮ್ಮ ಕಿವಿಗಳ ಸುತ್ತ ಸೊಳ್ಳೆಗಳು ಒಂದೇ ಸಮನೆ ಗುಯ್ಯ್ ಎನ್ನುತ್ತಿದ್ದರೆ ನಿಮಗೆ ಕಿರಿಕಿರಿ ಆಗುವುದಿಲ್ಲವೇ? ಸೊಳ್ಳೆಗಳ ಕಾಟ ಸಿಕ್ಕಾಪಟ್ಟೆ ಆದರೆ ನಿದ್ರೆ ಮಾಡುವುದು ಬಲೇ ಕಷ್ಟ ಅಲ್ಲವೇ? ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್‌ಗೂ ಇದೇ ಸಮಸ್ಯೆ ಆಗಿದೆ.
ಸಿಧಿ ಪಟ್ಟಣದಲ್ಲಿರುವ ಸರ್ಕ್ಯೂಟ್ ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದ ವೇಳೆ ಸೊಳ್ಳೆಗಳ ಕಾಟದಿಂದ ಸಿಎಂಗೆ ನಿದ್ರೆ ಮಾಡಲಾಗಲಿಲ್ಲ. ಅದಲ್ಲದೇ ಬೆಳಗ್ಗಿನ ಜಾವ 4 ಗಂಟೆಯ ವೇಳೆ ನೀರಿನ ಟ್ಯಾಂಕ್ ತುಂಬಿ ಹರಿಯುತ್ತಿದ್ದ ವೇಳೆ ಖುದ್ದು ಅವರೇ ಎದ್ದು ನೀರನ್ನು ನಿಲ್ಲಿಸಬೇಕಾಗಿ ಬಂದಿತ್ತು..!
ಬಸ್ ಅವಘಡದಲ್ಲಿ ಮೃತಪಟ್ಟವರ ಕುಟುಂಬಗಳನ್ನು ಭೇಟಿ ಮಾಡಲೆಂದು ಸಿಧಿಗೆ ಭೇಟಿ ಕೊಟ್ಟಿದ್ದ ವೇಳೆ ಚೌಹಾಣ್‌ಗೆ ಹೀಗೆ ಆಗಿದೆ. ಈ ವೇಳೆ ಸರ್ಕ್ಯೂಟ್ ಹೌಸ್‌ನಲ್ಲಿ ಒಂದು ರಾತ್ರಿ ಕಳೆಯಬೇಕಾಗಿ ಬಂದಾಗ ಅಲ್ಲಿ ಸೊಳ್ಳೆ ಪರದೆ ಇಲ್ಲದೇ ಇರುವುದನ್ನು ಕಂಡು ದೂರು ಕೊಟ್ಟಿದ್ದಾರೆ ಸಿಎಂ. ಬೆಳಗ್ಗಿನ ಜಾವ 2:30ಕ್ಕೆ ಕೋಣೆಗೆ ಸೊಳ್ಳೆಯ ರಿಪಲ್ಲೆಂಟ್ ಸ್ಪ್ರೇ ಮಾಡಲಾಗಿದೆ.
ಸ್ವಂತ ಮನೆ ಹೊಂದುವ ಕನಸು ಕಂಡವರಿಗೆ ಸರ್ಕಾರದಿಂದ ಸಿಹಿ ಸುದ್ದಿ, ಕೈಗೆಟುಕುವ ದರದಲ್ಲಿ ವಸತಿ
ಸರ್ಕ್ಯೂಟ್ ಹೌಸ್‌ನ ಈ ಅವತಾರವನ್ನು ಖುದ್ದು ಅನುಭವಿಸಿದ ಸಿಎಂ ಕೂಡಲೇ ಆ ಕಟ್ಟಡದ ಚಾರ್ಜ್‌ನಲ್ಲಿದ್ದ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಹಾಗೂ ಉಪ ಇಂಜಿನಿಯರ್‌ರನ್ನು ಅಮಾನತುಗೊಳಿಸಿದ್ದಾರೆ.