ಬೆಂಗಳೂರು: ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ ಎಂದು ಇಂಧನ ಸಚಿವ ಕೆ.ಜೆ. ಚಾರ್ಜ್ ಹೇಳಿದ್ದು, ವಿದ್ಯುತ್ ಖರೀದಿ ಅವ್ಯವಹಾರ ಆರೋಪಕ್ಕೆ ಕಿಡಿಕಾರಿದ್ದಾರೆ.
ದೆಹಲಿಯ ಕರ್ನಾಟಕ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಮಾಚಲ ಪ್ರದೇಶದಿಂದಲೂ ವಿದ್ಯುತ್ ಖರೀದಿ ಮಾಡಲಾಗುತ್ತದೆ. ನಾವು ಯಾವುದೇ ಖಾಸಗಿ ಸಂಸ್ಥೆಗಳಿಂದ ವಿದ್ಯುತ್ ಖರೀದಿಸುತ್ತಿಲ್ಲ ಎಂದು ತಿಳಿಸಿದ್ದಾರೆ.
ಗೃಹಜ್ಯೋತಿ ಯೋಜನೆಗೆ ಪ್ರತಿದಿನ ಸರಾಸರಿ 43 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆ ಮಾಡುತ್ತಿದ್ದು, ಇದಕ್ಕೆ ಪ್ರತಿ ತಿಂಗಳಿಗೆ 750 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಕೋಜನರೇಶನ್ ನಿಂದ 600 ಮೆ.ವ್ಯಾ. ವಿದ್ಯುತ್ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
ವಿದ್ಯುತ್ ಕೃತಕ ವಿದ್ಯುತ್ ಅಭಾವ ಸೃಷ್ಟಿಸಿ, ವಿದ್ಯುತ್ ಖರೀದಿ ಮಾಡಿ ಹಣ ಲೂಟಿ ಮಾಡಲಾಗುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆರೋಪ ಆಧಾರ ರಹಿತವಾಗಿದೆ. ಅವರಿಗೆ ಮಾಹಿತಿ ಕೊರತೆ ಇದೆ. ಸೆಂಟ್ರಲ್ ಗ್ರಿಡ್ ಗ್ರಿಡ್ ನಿಂದ ಖರೀದಿ ಮಾಡಲಾಗುತ್ತದೆ. ಬೇಕಿದ್ದರೆ ಮಾಹಿತಿ ನೀಡಲು ಸಿದ್ಧ. ಅವರಿಗೆ ಅನುಮಾನವಿದ್ದರೆ ಸಹೋದರ ಹೆಚ್.ಡಿ. ರೇವಣ್ಣ ಅವರನ್ನು ಕೇಳಲಿ ಎಂದು ಹೇಳಿದ್ದಾರೆ.