ಸೊಸೆ – ಮಗನ ಫೋಟೋ ಚೆನ್ನಾಗಿ ಬರಲೆಂದು ಖುದ್ದು ಅತ್ತೆ – ಮಾವನೇ ಸೊಸೆಗೆ ಸಹಾಯ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ಮರಾಠಿ ನಟ ಭೂಷಣ್ ಪ್ರಧಾನ್ ಈ ವಿಡಿಯೋ ಶೇರ್ ಮಾಡಿದ್ದು, ಇನ್ಸ್ಟಾಗ್ರಾಂನಲ್ಲಿ ಮಿಲಿಯನ್ ವೀಕ್ಷಣೆಗಳನ್ನು ಗಿಟ್ಟಿಸಿದೆ. ವಿಡಿಯೋದಲ್ಲಿರುವ ಕುಟುಂಬವನ್ನು ಪೋಸ್ಟ್ಗೆ ಟ್ಯಾಗ್ ಮಾಡಲಾಗಿದೆ.
ಕಡಲ ತೀರದಲ್ಲಿ ಪತಿಯೊಂದಿಗೆ ಫೋಟೋ ಶೂಟ್ ಒಂದಕ್ಕೆ ಸಜ್ಜಾಗುತ್ತಿರುವ ತಮ್ಮ ಸೊಸೆಗೆ ಬದಿಯಲ್ಲಿ ನಿಂತ ಅತ್ತೆ – ಮಾವ ನೆರವಾಗುತ್ತಿರುವುದನ್ನು ನೋಡಬಹುದಾಗಿದೆ.
ಸ್ಮಾರ್ಟ್ಫೋನ್ ಹಿಡಿದ ಮಾವ ಚಿತ್ರವನ್ನು ಸೆರೆ ಹಿಡಿಯಲು ಮುಂದಾದರೆ, ಅತ್ತೆ ತಮ್ಮ ಸೊಸೆಯ ದುಪ್ಪಟ್ಟಾವನ್ನು ಸರಿಯಾಗಿ ಹಿಡಿದುಕೊಂಡು ಪೋಸ್ ಚೆನ್ನಾಗಿ ಬರಲೆಂದು ನೆರವಾಗಿದ್ದಾರೆ.
ಹಿರಿಯರ ನೆರವಿನಿಂದ ದಂಪತಿಗೆ ಕೊನೆಗೂ ತಾವಂದುಕೊಂಡ ಫೋಟೋ ತೆಗೆಯಲು ಸಾಧ್ಯವಾಗಿದೆ.
https://youtu.be/XpYP3VyPWvc