ಭಾರತದಲ್ಲಿರುವ ಅನೇಕ ಐಟಿ ಕಂಪನಿಗಳು ತಂತಮ್ಮ ಕಚೇರಿಗಳಿಂದ ಕೆಲಸವನ್ನು ಮರಳಿ ಆರಂಭಿಸಲು ಚಿಂತನೆ ನಡೆಸುತ್ತಿದ್ದು, ಮುಂದಿನ ವರ್ಷದ ಜನವರಿಯಿಂದ ಜೂನ್‌ವರೆಗಿನ ಅವಧಿಯಲ್ಲಿ ತಂತಮ್ಮ ಸಿಬ್ಬಂದಿ ವರ್ಗಗಳ 50%ನಷ್ಟಾದರೂ ಉದ್ಯೋಗಿಗಳನ್ನು ಮರಳಿ ಕಚೇರಿಗೆ ಕರೆಯಿಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿವೆ.
ಕೋವಿಡ್-19ನ ಮೂರನೇ ಅಲೆ ನಿಯಂತ್ರಣದಲ್ಲಿ ಇದ್ದರೆ ಕಂಪನಿಗಳ ಈ ಲೆಕ್ಕಾಚಾರ ಕಾರ್ಯರೂಪಕ್ಕೆ ಬರಲಿದೆ ಎನ್ನಲಾಗುತ್ತಿದೆ. ಒಮಿಕ್ರಾನ್ ವ್ಯಾಪಿಸುತ್ತಿರುವ ವೇಗದ ಮೇಲೆ ಕಣ್ಣಿಟ್ಟು, ಐಟಿ ಕಂಪನಿಗಳಿಗೆ ಕೆಲಸ ಮಾಡುತ್ತಿರುವ ರಿಯಲ್ ಎಸ್ಟೇಟ್ ಹಾಗೂ ಸವಲತ್ತುಗಳ ಸಂಸ್ಥೆಗಳು ತಮ್ಮ ಕಾರ್ಯಚಟುವಟಿಕೆಗಳನ್ನು ಇನ್ನಷ್ಟು ಹೆಚ್ಚಿಸಲು ಸಜ್ಜಾಗುತ್ತಿವೆ.
ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬರುತ್ತಿದ್ದಂತೆ ಹೊಳೆಯಲು ಶುರುವಾಗುತ್ತೆ ಮಾಸ್ಕ್…..!
ಅದಾಗಲೇ, 45 ವರ್ಷ ವಯಸ್ಸಿನ ಒಳಗಿನ ಉದ್ಯೋಗಿಗಳನ್ನು ವಾರದಲ್ಲಿ 2-3 ದಿನಗಳ ಮಟ್ಟಿಗೆ ಕಚೇರಿಗೆ ಬಂದು ಕೆಲಸ ಮಾಡುವ ಹೈಬ್ರಿಡ್ ಕೆಲಸದ ಸಂಸ್ಕೃತಿಗೆ ಕಂಪನಿಗಳು ಒಗ್ಗಿಸಲು ಆರಂಭಿಸಿವೆ.
ಈ ವರ್ಷದ ಜೂನ್-ಜುಲೈನಿಂದಲೇ ಕಚೇರಿಗಳನ್ನು ಸಕ್ರಿಯಗೊಳಿಸಲು ಮುಂದಾಗಿದ್ದ ಐಟಿ ಕಂಪನಿಗಳಿಗೆ ಕೋವಿಡ್‌ನ ಎರಡನೇ ಅಲೆಯಿಂದಾಗಿ ತಮ್ಮ ನಿರ್ಧಾರ ಹಿಂದಕ್ಕೆ ಪಡೆಯುವಂತೆ ಆಗಿತ್ತು. ಆ ಕಾರಣದಿಂದಾಗಿ ಡಿಸೆಂಬರ್‌ವರೆಗೂ ಮನೆಯಿಂದ ಕೆಲಸ ಮಾಡುವ ಆಯ್ಕೆಯನ್ನು ಮುಂದುವರೆಸಲಾಗಿದೆ.