ನವದೆಹಲಿ : ದೇಶಾದ್ಯಂತ ಏಕಲವ್ಯ ಮಾದರಿ ವಸತಿ ಶಾಲೆಗಳು (ಇಎಂಆರ್‌ಎಸ್) ಸಿಬ್ಬಂದಿ ನೇಮಕಾತಿ ಬೋಧಕ ಮತ್ತು ಬೋಧಕೇತರ 10,391 ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.
ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 19 ರವರೆಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ನ್ಯಾಷನಲ್ ಎಜುಕೇಶನ್ ಸೊಸೈಟಿ ಫಾರ್ ಟ್ರೈಬಲ್ ಸ್ಟೂಡೆಂಟ್ಸ್ (ಎನ್ ಇಎಸ್ ಟಿಎಸ್) ಪ್ರಕಟಣೆಯಲ್ಲಿ ತಿಳಿಸಿದೆ. ಎನ್ಸಿಟಿಸಿಯಿಂದ ಮಾನ್ಯತೆ ಪಡೆದ ಮೂರು ವರ್ಷಗಳ ಇಂಟಿಗ್ರೇಟೆಡ್ ಬಿಎಡ್ ಮತ್ತು ಎಂಎಡ್ ಪದವಿ ಪಡೆದ ಅಭ್ಯರ್ಥಿಗಳು ಪಿಜಿಟಿ ಮತ್ತು ಟಿಜಿಟಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಈ ವರ್ಷದ ಜೂನ್ ಅಂತ್ಯದಲ್ಲಿ 4,062 ಹುದ್ದೆಗಳಿಗೆ ಮತ್ತೊಂದು ಅಧಿಸೂಚನೆ ಹೊರಡಿಸಲಾಯಿತು ಮತ್ತು ಕೆಲವು ದಿನಗಳ ನಂತರ, ಇನ್ನೂ 6,329 ಹುದ್ದೆಗಳಿಗೆ ಮತ್ತೊಂದು ಅಧಿಸೂಚನೆ ಹೊರಡಿಸಲಾಯಿತು. ಎರಡು ಅಧಿಸೂಚನೆಗಳಲ್ಲಿ ಒಟ್ಟು 10,391 ಉದ್ಯೋಗಗಳಿವೆ. ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬರುವ ನ್ಯಾಷನಲ್ ಎಜುಕೇಶನ್ ಸೊಸೈಟಿ ಫಾರ್ ಟ್ರೈಬಲ್ ಸ್ಟೂಡೆಂಟ್ಸ್ (ಎನ್‌ಇಎಸ್ಟಿಎಸ್) ಪ್ರಾಂಶುಪಾಲರು, ಪಿಜಿಟಿ, ಟಿಜಿಟಿ, ಹಾಸ್ಟೆಲ್ ವಾರ್ಡನ್ ಸೇರಿದಂತೆ ಹಲವಾರು ಬೋಧಕೇತರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಆಕರ್ಷಕ ವೇತನ ನೀಡಲಾಗುವುದು. ಈ ಉದ್ಯೋಗಗಳಲ್ಲಿ ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳು https://emrs.tribal.gov.in/ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
4,062 ಹುದ್ದೆಗಳಿಗೆ ಹಿಂದಿನ ಅಧಿಸೂಚನೆಯಲ್ಲಿ, ಪ್ರಿನ್ಸಿಪಾಲ್-303; ಪೋಸ್ಟ್ ಗ್ರಾಜುಯೇಟ್ ಟೀಚರ್ (ಪಿಜಿಟಿ) – 2266; ಅಕೌಂಟೆಂಟ್-361; ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ (ಜೆಎಸ್‌ಎ) – 759; 373 ಲ್ಯಾಬ್ ಅಟೆಂಡೆಂಟ್-373 ಹುದ್ದೆಗಳಿವೆ.
ಅಲ್ಲದೆ, 6,329 ಹುದ್ದೆಗಳಿಗೆ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ, ತರಬೇತಿ ಪಡೆದ ಪದವೀಧರ ಶಿಕ್ಷಕರ (ಟಿಜಿಟಿ) 5660 ಹುದ್ದೆಗಳು ಖಾಲಿ ಇವೆ. ಇದಲ್ಲದೆ, ಹಾಸ್ಟೆಲ್ ವಾರ್ಡನ್ ಪುರುಷರ ವಿಭಾಗದಲ್ಲಿ 335 ಮತ್ತು ಮಹಿಳಾ ವಿಭಾಗದಲ್ಲಿ 334 ಹುದ್ದೆಗಳು ಖಾಲಿ ಇವೆ.