ಕಂಪನಿಯ ಸಿಸಿ ಟಿವಿ ದೃಶ್ಯಾವಳಿಗಳನ್ನು ಗಮನಿಸಿ ಉದ್ಯೋಗಿಯೊಬ್ಬರಿಗೆ ಸೋಮಾರಿ ಎಂದು ಬಾಸ್ ಆರೋಪಿಸಿದ್ದಕ್ಕೆ ಕುಪಿತಗೊಂಡ ಉದ್ಯೋಗಿ, ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ, ಇದು ಅಗೌರವದ ವರ್ತನೆ ಎಂದು ಅವರು ಬಾಸ್ ವಿರುದ್ಧ ಕಿಡಿಕಾರಿದ್ದಾರೆ.
ಅನಾಮಧೇಯ ವ್ಯಕ್ತಿಯೊಬ್ಬರು ರೆಡ್ಡಿಟ್ ನಲ್ಲಿ ಈ ಬಗ್ಗೆ ಹಂಚಿಕೊಂಡಿದ್ದಾರೆ. “ನಾನು ಇಂದು ನಮ್ಮ ಶಿಫ್ಟ್ನಿಂದ ಕ್ಯಾಮರಾಗಳನ್ನು ಪರಿಶೀಲಿಸುತ್ತಿದ್ದೆ ಮತ್ತು ನಿಮ್ಮ ಹೆಚ್ಚಿನ ಶಿಫ್ಟ್ಗಾಗಿ ನೀವು ಸ್ಟೂಲ್ನಲ್ಲಿ ಕುಳಿತಿರುವುದನ್ನು ಗಮನಿಸಿದ್ದೇವೆ. ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲದ ನಡವಳಿಕೆ” ಎಂದು ಬಾಸ್ ಹೇಳಿರುವ ಸಂಭಾಷಣೆಯನ್ನು ಉದ್ಯೋಗಿ ಹಂಚಿಕೊಂಡಿದ್ದಾರೆ.
“ನನ್ನ ಎಡ ಪಾದದ ಎರಡು ಮೂಳೆ ಮುರಿದಿದ್ದು, ಹೀಗಾಗಿ ಕುಳಿತಿದ್ದೆ” ಎಂದು ಉದ್ಯೋಗಿ ಮಾರುತ್ತರ ನೀಡಿದ್ದಾರೆ. ಆದರೆ, ನೌಕರನ ಈ ಹೇಳಿಕೆಯಿಂದ ಬಾಸ್ ಗೆ ತೃಪ್ತಿಯಾಗಿಲ್ಲ. ಈ ರೀತಿಯ ನಡವಳಿಕೆ ಸೂಕ್ತವಲ್ಲ ಎಂದು ಹೇಳಿದ್ದಾರೆ.
ಇದರಿಂದ ಬೇಸರಗೊಂಡ ಉದ್ಯೋಗಿ, ಅಜ್ಞಾನಿಗಳು ಚುಕ್ಕಾಣಿ ಹಿಡಿದಿದ್ದಾರೆ. ನಾನು ಈ ಕ್ಷಣದಿಂದಲೇ ಇಲ್ಲಿರುವುದಿಲ್ಲ ಎಂದು ಹೇಳುತ್ತಾ ಹೊರನಡೆದಿದ್ದಾರೆ. ಇದರಿಂದ ದಿಗ್ಭ್ರಮೆಗೊಂಡ ಬಾಸ್, ಆತುರಪಡಬೇಡಿ ಎಂದಿದ್ದಾರೆ. ಆದರೆ, ಉದ್ಯೋಗಿಯು ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ ಕಂಪನಿಯಿಂದ ಹೊರನಡೆದಿದ್ದಾರೆ.