alex Certify ಮದುವೆ ನಂತ್ರ ಬದಲಾಗುತ್ತೆ ಉದ್ಯೋಗಿ ಪಿಂಚಣಿ ಯೋಜನೆ ನಿಯಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ನಂತ್ರ ಬದಲಾಗುತ್ತೆ ಉದ್ಯೋಗಿ ಪಿಂಚಣಿ ಯೋಜನೆ ನಿಯಮ

ಇಪಿಎಫ್ ಮತ್ತು ಇಪಿಎಸ್ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಅಗತ್ಯದ ಸಮಯದಲ್ಲಿ ಮಾತ್ರವಲ್ಲದೆ ಪಿಎಫ್ ಹಣದಿಂದ ಅನೇಕ ಪ್ರಯೋಜನವಿದೆ. ಭವಿಷ್ಯ ನಿಧಿ, ಉದ್ಯೋಗಿಗೆ ಮಾತ್ರವಲ್ಲ ಆತನ ಕುಟುಂಬಕ್ಕೂ ನೆರವಾಗುತ್ತದೆ. ಇಪಿಎಫ್‌ಒ ಸದಸ್ಯ ಸತ್ತಾಗ ಹಣ,‌ ಆತನ ಕುಟುಂಬಕ್ಕೆ ಸೇರುತ್ತದೆ.

ಒಬ್ಬ ವ್ಯಕ್ತಿಯು ಮದುವೆಯಾದ ತಕ್ಷಣ, ಇಪಿಎಫ್ ಮತ್ತು ಇಪಿಎಸ್ ನಿಯಮಗಳಲ್ಲಿ ಬದಲಾವಣೆಯಾಗುತ್ತದೆ. ಮದುವೆಯ ನಂತರ ನಾಮನಿರ್ದೇಶನ ರದ್ದುಗೊಳ್ಳುತ್ತದೆ. ವ್ಯಕ್ತಿಯ ಮದುವೆಯ ನಂತರ, ಇಪಿಎಫ್ ಮತ್ತು ಇಪಿಎಸ್‌ನಲ್ಲಿ, ನಾಮನಿರ್ದೇಶನವನ್ನು ರದ್ದುಗೊಳಿಸಲಾಗುತ್ತದೆ. ಇದನ್ನು ನೌಕರರ ಭವಿಷ್ಯ ನಿಧಿ ಯೋಜನೆ 1952 ರ ನಿಯಮಗಳಲ್ಲಿ ಉಲ್ಲೇಖಿಸಲಾಗಿದೆ.

ನಿಯಮಗಳ ಪ್ರಕಾರ, ಸದಸ್ಯರು ಮದುವೆಗೆ ಮುನ್ನ ಇಪಿಎಫ್ ಮತ್ತು ಇಪಿಎಸ್‌ಗಾಗಿ ಯಾವುದೇ ನಾಮನಿರ್ದೇಶ ಮಾಡಿದ್ದರೂ, ಅವರು ಮದುವೆಯ ನಂತರ ಅದು ಅಮಾನ್ಯವಾಗುತ್ತದೆ. ಇದರರ್ಥ ಮದುವೆಯ ನಂತರ, ಮತ್ತೊಮ್ಮೆ ನಾಮನಿರ್ದೇಶನ ಮಾಡುವ ಅವಶ್ಯಕವಿದೆ.

ಮದುವೆಗೆ ಮೊದಲು ಇಪಿಎಫ್ ಮತ್ತು ಇಪಿಎಸ್ ನಲ್ಲಿ ಮಾಡಿದ ನಾಮನಿರ್ದೇಶನಗಳು, ಮದುವೆಯ ನಂತರ ಸ್ವಯಂಚಾಲಿತವಾಗಿ ರದ್ದಾಗುತ್ತವೆ. ಇಪಿಎಫ್ ಕಾಯಿದೆ ಪ್ರಕಾರ, ಭವಿಷ್ಯ ನಿಧಿ ಖಾತೆಯಲ್ಲಿ ನಾಮನಿರ್ದೇಶನ ಮಾಡಲು ಷರತ್ತುಗಳಿವೆ. ಇಪಿಎಫ್ ಕಾಯಿದೆಯಡಿ, ಪುರುಷ ಸದಸ್ಯರ ವಿಷಯದಲ್ಲಿ ಕುಟುಂಬ ಎಂದರೆ ಪತ್ನಿ, ಮಕ್ಕಳು, ಅವಲಂಬಿತ ಪೋಷಕರು ಮತ್ತು ಮೃತ ಮಗನ ಪತ್ನಿ ಮತ್ತು ಮಕ್ಕಳು. ಮಹಿಳಾ ಸದಸ್ಯರ ವಿಷಯದಲ್ಲಿ ಕುಟುಂಬ ಎಂದರೆ ಗಂಡ, ಮಕ್ಕಳು, ಅವಲಂಬಿತ ಪೋಷಕರು, ಅತ್ತೆ ಮತ್ತು ಮೃತ ಮಗನ ಹೆಂಡತಿ ಮತ್ತು ಮಕ್ಕಳು.

ನಿಯಮಗಳ ಪ್ರಕಾರ, ಇಪಿಎಫ್ ಸದಸ್ಯರು ಯಾವುದೇ ಕುಟುಂಬ ಸದಸ್ಯರನ್ನು ಹೊಂದಿಲ್ಲದಿದ್ದರೆ, ಅವರು ಯಾವುದೇ ವ್ಯಕ್ತಿಯನ್ನು ನಾಮನಿರ್ದೇಶನ ಮಾಡಬಹುದು. ಆದ್ರೆ ಮದುವೆಯ ನಂತರ ನಾಮಿನಿ ಬದಲಾಗುತ್ತದೆ.

ಇಪಿಎಫ್ ಯೋಜನೆಯಡಿಯಲ್ಲಿ ಯಾವುದೇ ನಾಮನಿರ್ದೇಶನವನ್ನು ಮಾಡದಿದ್ದರೆ, ಠೇವಣಿ ಮಾಡಿದ ಸಂಪೂರ್ಣ ಮೊತ್ತವನ್ನು ಕುಟುಂಬ ಸದಸ್ಯರಿಗೆ ಸಮಾನವಾಗಿ ಹಂಚಲಾಗುತ್ತದೆ. ವ್ಯಕ್ತಿಯು ಮದುವೆಯಾಗದಿದ್ದರೆ, ಮೊತ್ತವನ್ನು ಅವಲಂಬಿತ ಪೋಷಕರಿಗೆ ನೀಡಲಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...