ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನ ಕಡಿತಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ತೀರ್ಮಾನ ಕೈಗೊಳ್ಳಲು ಸರ್ಕಾರಿ ನೌಕರರ ಸಂಘಕ್ಕೆ ತಿಳಿಸಲಾಗಿದೆ.
ವೈದ್ಯಶಿಕ್ಷಣ, ಗೃಹ, ಆರೋಗ್ಯ, ಕಂದಾಯ ಇಲಾಖೆ ಹೊರತುಪಡಿಸಿ ಉಳಿದ ಇಲಾಖೆಯ ನೌಕರರು ತಮ್ಮ ವೇತನದಲ್ಲಿ ನಿರ್ದಿಷ್ಟ ಪಾಲನ್ನು ಕೋವಿಡ್ ಕೇರ್ ನಿಧಿಗೆ ಕೊಡಬೇಕು ಎಂದು ತಿಳಿಸಲಾಗಿದೆ. ಸರ್ಕಾರಿ ನೌಕರರ ಒಂದು ದಿನದ ಅಥವಾ ಗರಿಷ್ಠ ಒಂದು ವಾರದ ವೇತನ ನೀಡಬೇಕಾಗಬಹುದು ಎನ್ನಲಾಗಿದ್ದು, ಇದರ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವಂತೆ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ತಿಳಿಸಲಾಗಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸಂಪುಟ ಸದಸ್ಯರ 1 ವರ್ಷದ ವೇತನವನ್ನು ಕೋವಿಡ್ ಕೇರ್ ನಿಧಿಗೆ ನೀಡಲು ಒಪ್ಪಿಗೆ ಸೂಚಿಸಲಾಗಿದೆ. ಶಾಸಕರ ಒಂದು ತಿಂಗಳ ವೇತನ ನೀಡುವಂತೆ ಮನವಿ ಮಾಡಲಿದ್ದು, ಸರ್ಕಾರಿ ನೌಕರರ ವೇತನ ಬಿಟ್ಟುಕೊಡುವಂತೆ ನೌಕರರ ಸಂಘದಿಂದ ಒಮ್ಮತದ ತೀರ್ಮಾನ ಕೈಗೊಳ್ಳಲು ತಿಳಿಸಲಾಗಿದೆ.