ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್, ಅಗತ್ಯವಸ್ತುಗಳ ಬೆಲೆಗಳೆಲ್ಲವೂ ಏರಿಕೆಯಾಗಿದೆ. ಈ ನಡುವೆ ವಾಹನ ಸವಾರರಿಗೆ ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಇನ್ಮುಂದೆ ವಾಹನಗಳ ಎಮಿಷನ್ ಟೆಸ್ಟ್ ಬೆಲೆ ಏರಿಸುವ ಸಾಧ್ಯತೆ ದಟ್ಟವಾಗಿದೆ.
ದ್ವಿಚಕ್ರವಾಹನ, ಕಾರು, ಆಟೋ, ಲಾರಿ, ಬಸ್ಸು ಯಾವುದೇ ವಹನದ ಚಾಲಕರಾಗಿರಲಿ, ಮಲೀಕರಾಗಿರಲಿ ಎಮಿಷನ್ ಟೆಸ್ಟ್ ಮಾಡಿಸುವುದು ಕಡ್ಡಾಯ. ಇದೀಗ ಎಮಿಇಷನ್ ಟೆಸ್ಟ್ ದರ ಯಾವುದೇ ಕ್ಷಣದಲ್ಲಾದರೂ ಹೆಚ್ಚಳವಾಗುವ ಸಾಧ್ಯತೆ ಇದೆ.
2021ರಲ್ಲಿ ಎಮಿಷನ್ ಟೆಸ್ಟಿಂಗ್ ದರ ಹೆಚ್ಚಳ ಮಾಡಲಾಗಿತ್ತು. ಈಗ ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ. ದರ ಏರಿಕೆ ಮಾಡುವಂತೆ ಕರ್ನಾಟಕ ಎಮಿಷನ್ ಟೆಸ್ಟಿಂಗ್ ಸೆಂಟರ್ ಓನರ್ ಅಸೋಸಿಯೇಷನ್ ಸಾರಿಗೆ ಸಚಿವರಿಗೆ ಒತ್ತಾಯಿಸಿದೆ. ಹಿಂದಿನ ದರಕ್ಕಿಂದ ನಾಲ್ಕು ಪಟ್ಟು ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.