ಕೊರೊನಾ ವೈರಸ್, ಗ್ರಾಹಕರ ಖರೀದಿ ಮೇಲೆ ದೊಡ್ಡ ರೀತಿಯಲ್ಲಿ ಪ್ರಭಾವ ಬೀರಿದೆ. ಕೊರೊನಾ ಸೋಂಕಿನಿಂದಾಗಿ ಜನರು, ಅನವಶ್ಯಕ ಖರೀದಿ ನಿಲ್ಲಿಸಿದ್ದು, ಅವಶ್ಯಕತೆಗೆ ಅನುಗುಣವಾಗಿ ವಸ್ತುಗಳ ಖರೀದಿ ಶುರು ಮಾಡಿದ್ದಾರೆ. ಇದು ಎಲ್ಲ ಬ್ರಾಂಡ್ ಗಳ ಮಾರಾಟದ ಮೇಲೆ ಪರಿಣಾಮ ಬೀರಿದೆ. ಗ್ರಾಹಕರು ಸಿಂಗಲ್ ಪೇಮೆಂಟ್ ವಸ್ತುಗಳ ಖರೀದಿ ಹಾಗೂ ಪಾವತಿಗೆ ಮನಸ್ಸು ಮಾಡಿಲ್ಲ. ಇದೇ ಕಾರಣಕ್ಕೆ ಇಎಂಐ ವಹಿವಾಟಿನಲ್ಲಿ ಹೆಚ್ಚಳ ಕಂಡು ಬಂದಿದೆ.
ಎಜೆಟಾಪ್ ಪ್ರಕಾರ, ಡೆಬಿಟ್ ಕಾರ್ಡ್ ಇಎಂಐನಲ್ಲಿ ಹೆಚ್ಚಳ ಕಂಡು ಬಂದಿದೆ. ಫೆಬ್ರವರಿ 2020 ರಲ್ಲಿ ಇಎಂಐ ವಹಿವಾಟುಗಳಿಗೆ ಹೋಲಿಸಿದರೆ ಜುಲೈ 2021 ರಲ್ಲಿ ಇಎಂಐ ವಹಿವಾಟಿನಲ್ಲಿ ಶೇಕಡಾ 220 ರಷ್ಟು ಹೆಚ್ಚಳವಾಗಿದೆ. ಕೊರೊನಾದಿಂದಾಗಿ, ದೇಶಾದ್ಯಂತ ಗ್ರಾಹಕರ ಖರೀದಿ ಶಕ್ತಿಯಲ್ಲಿ ಕುಸಿತ ಕಂಡುಬಂದಿದೆ.
2021 ರಲ್ಲಿ ಇಎಂಐ ವಹಿವಾಟಿನಲ್ಲಿ ಶೇಕಡಾ 220 ರಷ್ಟು ಹೆಚ್ಚಳವಾಗಿದೆ ಎಂದು ಡಿಜಿಟಲ್ ಪಾವತಿಗಳ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಎಜೆಟಾಪ್ ಹೇಳಿದೆ. ಇಎಂಐ ವಹಿವಾಟಿನಲ್ಲಿ ದೇಶದ ರಾಜಧಾನಿ ದೆಹಲಿ ಮುಂಚೂಣಿಯಲ್ಲಿದೆ. ಇಲ್ಲಿ ಸುಮಾರು ಶೇಕಡಾ 258ರಷ್ಟು ಹೆಚ್ಚಳ ಕಂಡುಬಂದಿದೆ. ಎರಡನೇ ಸ್ಥಾನದಲ್ಲಿ ಬೆಂಗಳೂರಿನಲ್ಲಿದೆ. ಫೆಬ್ರವರಿ 2020 ಕ್ಕೆ ಹೋಲಿಸಿದರೆ ಶೇಕಡಾ 206 ರಷ್ಟು ಹೆಚ್ಚಳವಾಗಿದೆ. ಅಹಮದಾಬಾದ್‌ನಲ್ಲಿ ಶೇಕಡಾ 230 ಮತ್ತು ಪುಣೆಯಲ್ಲಿ ಶೇಕಡಾ 210 ರಷ್ಟು ಹೆಚ್ಚಳವಾಗಿದೆ.
ಮೆಟ್ರೋ ನಗರದಲ್ಲಿ ಮಾತ್ರವಲ್ಲ, ಶ್ರೇಣಿ 2 ಮತ್ತು ಶ್ರೇಣಿ 3 ನಗರಗಳಲ್ಲಿಯೂ ಹೆಚ್ಚಳ ಕಂಡು ಬಂದಿದೆ.