ಕೊರೊನಾ ಲಾಕ್ ಡೌನ್ ವೇಳೆ ನಾಲ್ಕು ದಿನ ಮನೆಯಲ್ಲಿರಿ ಅಂದ್ರೆ ಜನ ಮನೆಯಲ್ಲಿರಲು ಹಿಂದೇಟು ಹಾಕ್ತಾರೆ. ಆದ್ರೆ ಮಹಿಳೆಯೊಬ್ಬಳು ಕಳೆದ 6 ವರ್ಷಗಳಿಂದ ಮನೆಯಿಂದ ಹೊರಗೆ ಹೋಗಿಲ್ಲ. ಆಕೆ ಎಮೆಟೊಫೋಬಿಯಾ ಎಂಬ ರೋಗದಿಂದ ಬಳಲುತ್ತಿದ್ದಾಳೆ. ಈ ಖಾಯಿಲೆ ಇರುವವರಿಗೆ ವಾಂತಿ ಭಯ ಕಾಡುತ್ತದೆ. ಇದೊಂದು ಆತಂಕದ ಭಯವಾಗಿದೆ.
35 ವರ್ಷದ ಎಮ್ಮಾ ಡೇವಿಸ್ ಈ ಖಾಯಿಲೆಯಿಂದ ಸಮಸ್ಯೆಗೊಳಗಾಗಿದ್ದಾಳೆ. ವಾಂತಿ ಆಗುತ್ತೆ ಎಂಬ ಭಯಕ್ಕೆ ಆಕೆ ಮನೆಯಿಂದ ಹೊರಗೆ ಹೋಗ್ತಿಲ್ಲ. ಕಳೆದ 10 ವರ್ಷಗಳಿಂದ ರೋಗವನ್ನು ಎದುರಿಸುತ್ತಿದ್ದಾಳೆ. ಆಕೆ ಅನಾರೋಗ್ಯ ಅಕ್ಕಪಕ್ಕದವರಲ್ಲಿ ಆತಂಕ ಹುಟ್ಟಿಸಿದೆ. ಅವರಿಗೆ ಭಯವಾಗದಿರಲಿ ಎನ್ನುವ ಕಾರಣಕ್ಕೆ ಈಕೆ ಮನೆಯಲ್ಲಿರುತ್ತಾಳಂತೆ. ಮನೆಯಲ್ಲಿರುವುದು ಆಕೆಗೆ ಅಭ್ಯಾಸವಾಗಿದೆ. ಮನೆಯಿಂದ ಹೊರ ಹೋಗುವುದಕ್ಕಿಂತ ಮನೆಯಲ್ಲಿ ಬಂಧಿಯಾಗಿದ್ರೆ ನೆಮ್ಮದಿ ಎನ್ನುತ್ತಾಳೆ ಆಕೆ. ಆದ್ರೆ ಅನಾರೋಗ್ಯದ ಕಾರಣ ಪ್ರತಿ ನಿಮಿಷವೂ ಆಕೆ ಸಮಸ್ಯೆ ಎದುರಿಸುತ್ತಿದ್ದಾಳೆ.
35 ವರ್ಷದ ಎಮ್ಮಾ, ಈ ಸಮಸ್ಯೆಯಿಂದ ಹೊರ ಬರಲು ಸಾಕಷ್ಟು ಚಿಕಿತ್ಸೆ ಪಡೆದಿದ್ದಾಳೆ. ಆದ್ರೆ ಯಾವುದೂ ಪ್ರಯೋಜನ ನೀಡಿಲ್ಲ. ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದ ಎಮ್ಮಾ, ಈ ಖಾಯಿಲೆ ನಂತ್ರ ಎಲ್ಲ ಕೆಲಸ ಬಿಟ್ಟು ಮನೆಯಲ್ಲಿ ಕುಳಿತಿದ್ದಾಳೆ.