alex Certify ಕತ್ತಿನ ಭಾಗದ ಕೊಬ್ಬಿನಿಂದ ಮುಜುಗರ ಅನುಭವಿಸುತ್ತಿದ್ದೀರಾ ? ಹಾಗಾದ್ರೆ ತಪ್ಪದೇ ಮಾಡಿ ಈ ಯೋಗಾಸನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕತ್ತಿನ ಭಾಗದ ಕೊಬ್ಬಿನಿಂದ ಮುಜುಗರ ಅನುಭವಿಸುತ್ತಿದ್ದೀರಾ ? ಹಾಗಾದ್ರೆ ತಪ್ಪದೇ ಮಾಡಿ ಈ ಯೋಗಾಸನ

High cholesterol: Symptoms may include swollen veins around the neck | Express.co.uk

ಹೆಚ್ಚಿನ ಜನರ ದೇಹದಲ್ಲಿ ಕೊಬ್ಬು ಸಂಗ್ರಹವಾಗುತ್ತಿದೆ. ಇದು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಇನ್ನು ಕೆಲವರಿಗೆ ಕುತ್ತಿಗೆ ಸುತ್ತ ಕೊಬ್ಬು ಸಂಗ್ರಹವಾಗುತ್ತದೆ.ಇದು ಅವರಿಗೆ ಮುಜುಗರವನ್ನುಂಟು ಮಾಡುತ್ತದೆ. ಹಾಗಾಗಿ ಈ ಕೊಬ್ಬನ್ನು ನಿವಾರಿಸಲು ಪ್ರತಿದಿನ ಈ ಯೋಗಾಸನ ಪ್ರಯತ್ನಿಸಿ ನೋಡಿ.

ಭುಜಂಗಾಸನ(ಕೊಬ್ರಾ ಪೋಸ್) : ನಿಮ್ಮ ಹೊಟ್ಟೆಯ ಮೇಲೆ ಮಲಗಿ ನಿಮ್ಮ ಅಂಗೈಯನ್ನು ಭುಜದ ನೇರಕ್ಕೆ ಕೆಳಗೆ ಇರಿಸಿ ಕೈಗಳ ಮೇಲೆ ಒತ್ತಡ ಹೇರಿ ದೇಹವನ್ನು ಮೇಲಕ್ಕೆತ್ತಿ. ತಲೆಯನ್ನು ಹಿಂದಕ್ಕೆ ಭಾಗಿಸಿ. ಈ ಸ್ಥಾನದಲ್ಲಿ ಕೆಲವು ಸೆಕೆಂಡುಗಳ ಕಾಲ ಇರಿ. ಇದು ಕೊಬ್ಬನ್ನು ಕಡಿಮೆ ಮಾಡುತ್ತದೆ.

ಧನುರಾಸನ (ಬಿಲ್ಲುಭಂಗಿ ) : ನೆಲದಲ್ಲಿ ನಿಮ್ಮ ಹೊಟ್ಟೆಯ ಮೇಲೆ ಮಲಗಿ ಕಾಲುಗಳನ್ನು ಮೇಲಕೆತ್ತಿ ನಿಮ್ಮ ಕೈಗಳಿಂದ ಹಿಡಿದುಕೊಳ್ಳಿ. ನಿಮ್ಮ ತೂಕವನ್ನು ಹೊಟ್ಟೆಯ ಮೇಲೆ ಹಾಕಿ. 30 ಸೆಕೆಂಡುಗಳ ಕಾಲ ಈ ಭಂಗಿಯಲ್ಲಿ ಇರಿ. ಇದು ಕೂಡ ಕತ್ತಿನ ಕೊಬ್ಬನ್ನು ಸುಲಭವಾಗಿ ಕರಗಿಸುತ್ತದೆ.

ಮತ್ಸ್ಯಾಸನ : ಇದನ್ನು ಮಾಡಲು ಚಾಪೆಯ ಮೇಲೆ ಮಲಗಿ ಅಂಗೈಯನ್ನು ಸೊಂಟದ ಕೆಳಗೆ ಇರಿಸಿ. ಮೊಣಕೈಗಳನ್ನು ಪರಸ್ಪರ ಹತ್ತಿರ ತನ್ನಿ. ನಿಮ್ಮ ಪಾದಗಳನ್ನು ತೊಡೆಯ ಮೇಲೆ ಇರಿಸಿ. ಇದನ್ನು ಮಾಡುವಾಗ ನಿಮ್ಮ ಉಸಿರನ್ನು ಒಳಕ್ಕೆ ಎಳೆಯಿರಿ, ಎದೆಯನ್ನು ಮೇಲಕ್ಕೆ ಎತ್ತಿ ನಿಮ್ಮ ಮೊಣಕೈಗಳ ಮೇಲೆ ದೇಹದ ಭಾರವನ್ನು ಹಾಕಿ.

ಈ ಯೋಗಾಸನಗಳ ಮೂಲಕ ಸುಲಭವಾಗಿ ನಿಮ್ಮ ಕತ್ತಿನ ಸುತ್ತಲಿನ ಕೊಬ್ಬನ್ನು ನಿವಾರಿಸಿಕೊಳ್ಳಬಹುದು. ಹಾಗೇ ಇದು ನಿಮ್ಮನ್ನು ಫಿಟ್ ಆಗಿ ಕೂಡ ಇಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...