ಕಂಕುಳಿನಲ್ಲಿರುವ ಕೂದಲನ್ನ ತೆಗಿಯಬೇಕು ಅಂತಾ ಯುವತಿಯರು ಇನ್ನಿಲ್ಲದ ಕ್ರಮವನ್ನ ಅನುಸರಿಸುತ್ತಾರೆ. ಬ್ಲೇಡ್, ವ್ಯಾಕ್ಸಿಂಗ್, ಕ್ರೀಮ್ಗಳು ಹೀಗೆ ನಾನಾ ಮಾರ್ಗಕ್ಕೆ ಮೊರೆ ಹೋಗ್ತಾರೆ. ಆದರೆ ಇದೆಲ್ಲದರ ಪರಿಣಾಮವಾಗಿ ಕಂಕುಳಿನಲ್ಲಿ ಕಪ್ಪು ಕಲೆಯಾಗುತ್ತೆ. ಇದು ಮಾತ್ರವಲ್ಲದೇ ಅತಿಯಾದ ಸುಗಂದ ದ್ರವ್ಯದ ಬಳಕೆ ಕೂಡ ನಿಮ್ಮ ಕಂಕುಳಿನ ಬಣ್ಣವನ್ನ ಕಪ್ಪು ಮಾಡುತ್ತೆ. ಇದರಿಂದಾಗಿ ತೋಳಿಲ್ಲದ ಉಡುಪನ್ನ ಧರಿಸೋಕೆ ಹಿಂಜರಿಯುತ್ತಾರೆ.
ನೀವು ಕೂಡ ಇಂತಹದ್ದೇ ಸಮಸ್ಯೆಯನ್ನ ಅನುಸರಿಸುತ್ತಿದ್ದರೆ ಇಲ್ಲಿರುವ ಕೆಲ ಮನೆಮದ್ದುಗಳನ್ನ ಟ್ರೈ ಮಾಡಿದ್ರೆ ಕೆಲವೇ ದಿನಗಳಲ್ಲಿ ನಿಮ್ಮ ಈ ಸಮಸ್ಯೆ ದೂರಾಗಲಿದೆ.
ಬೇಕಿಂಗ್ ಸೋಡಾ : ಬೇಕಿಂಗ್ ಸೋಡಾವನ್ನ ನೀರಿನಲ್ಲಿ ಮಿಶ್ರಣ ಮಾಡಿ ಇದನ್ನ ಕಂಕುಳಿಗೆ ಲೇಪಿಸಿಕೊಳ್ಳಿ. ಇದು ಒಣಗಿದ ಬಳಿಕ ತೊಳೆದುಕೊಳ್ಳಿ. ವಾರದಲ್ಲಿ ಎರಡು ದಿನ ಈ ಕ್ರಮ ಅನುಸರಿಸಿ. ಬಳಿಕ ಸ್ಕ್ರಬ್ ಹಾಕಿ ವಾಶ್ ಮಾಡಿ. ಕೆಲವೇ ದಿನಗಳಲ್ಲಿ ನಿಮಗೆ ಫಲಿತಾಂಶ ಸಿಗಲಿದೆ.
ಕೊಬ್ಬರಿ ಎಣ್ಣೆ : ಕೊಬ್ಬರಿ ಎಣ್ಣೆಯಿಂದ ಕಂಕುಳನ್ನ 15 ನಿಮಿಷಗಳ ಕಾಲ ಮಸಾಜ್ ಮಾಡಿ. ಇದರಲ್ಲಿರುವ ವಿಟಾಮಿನ್ ಇ ಅಂಶದಿಂದ ನಿಮ್ಮ ಕಂಕುಳಿನ ಬಣ್ಣ ಬದಲಾಗಲಿದೆ.
ಆಪಲ್ ಸೀಡರ್ ವಿನೇಗರ್ : ಸ್ವಲ್ಪ ಆಪಲ್ ಸೀಡರ್ ವಿನೇಗರ್ನ್ನು ಬೇಕಿಂಗ್ ಸೋಡಾದ ಜೊತೆ ಮಿಕ್ಸ್ ಮಾಡಿಕೊಳ್ಳಿ. ಇದನ್ನು ಕಂಕುಳಿಗೆ ಹಚ್ಚಿ. ಒಣಗಿದ ಬಳಿಕ ತಣ್ಣನೆಯ ನೀರಿನಲ್ಲಿ ವಾಶ್ ಮಾಡಿ.
ನಿಂಬು : ನಿಂಬುವಿನ ಹೋಳನ್ನ ಕಂಕುಳಿನ ಮೇಲೆ ಉಜ್ಜಿಕೊಳ್ಳಿ. ನಿತ್ಯ ಸ್ನಾನ ಮಾಡುವ ಮುನ್ನ ಈ ರೀತಿ ಮಾಡೋದ್ರಿಂದ ಕಂಕುಳಿನ ಬಣ್ಣ ಬದಲಾಗಲಿದೆ.