alex Certify ಮಾನವರಿಗೆ ಕಷ್ಟವಾಗುದ ದೈಹಿಕ ಕೆಲಸ ಮಾಡಿಕೊಡುವ ರೋಬೊಟ್‌ ಆವಿಷ್ಕಾರದಲ್ಲಿದ್ದಾರೆ ಮಸ್ಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾನವರಿಗೆ ಕಷ್ಟವಾಗುದ ದೈಹಿಕ ಕೆಲಸ ಮಾಡಿಕೊಡುವ ರೋಬೊಟ್‌ ಆವಿಷ್ಕಾರದಲ್ಲಿದ್ದಾರೆ ಮಸ್ಕ್

ಆವಿಷ್ಕಾರವನ್ನೇ ಜೀವನ ಮಾಡಿಕೊಂಡಿರುವ ಶತಕೋಟ್ಯಾಧಿಪತಿ ಎಲಾನ್ ಮಸ್ಕ್ ಕೃತಕ ಬುದ್ಧಿಮತ್ತೆಯಿಂದ ಕೆಲಸ ಮಾಡುವ ರೋಬೊಟ್‌ಗಳನ್ನು ಅಭಿವೃದ್ಧಿಪಡಿಸಿ, ಮಾನವರಿಗೆ ದೈಹಿಕ ಶ್ರಮದ ಕೆಲಸದಲ್ಲಿ ನೆರವಾಗುವಂತೆ ಮಾಡಲು ನೋಡುತ್ತಿದ್ದಾರೆ.

ತಮ್ಮ ಟೆಸ್ಲಾ ಕಂಪನಿಯು ಈ ಮಾನವ ರೋಬೊಟ್‌ ಅಭಿವೃದ್ಧಿಪಡಿಸುತ್ತಿದ್ದು, ಭವಿಷ್ಯದಲ್ಲಿ ಆರ್ಥಿಕತೆಗಳ ಮೇಲೆ ಇದು ಪ್ರಭಾವ ಬೀರಬಲ್ಲದು ಎಂದು ಮಸ್ಕ್ ತಿಳಿಸಿದ್ದಾರೆ.

ಸೆಹ್ವಾಗ್ ಪ್ರಕಾರ ಈ ಕ್ರಿಕೆಟರ್‌ ಬಹಳ ಫ್ಯಾಶನಬಲ್ ಅಂತೆ

ಟೆಸ್ಲಾ ಬೊಟ್ ಎಂದು ಕರೆಯಲಾಗುವ ಈ ರೋಬೊಟ್‌, ಐದು ಅಡಿ ಎಂಟು ಇಂಚು ಉದ್ದವಿರಲಿದ್ದು, 125 ಪೌಂಡ್ ತೂಗಲಿದೆ. ಪ್ರತಿ ಗಂಟೆಗೆ ಎಂಟು ಕಿಮೀ ನಡೆಯಲಿರುವ ಈ ರೋಬೊಟ್, ಮಾನವರು ಆರಾಮಾಗಿ ವಾಕ್ ಮಾಡಿದಂತೆ ಮಾಡಬಲ್ಲದು. 45 ಪೌಂಡ್‌ಗಳಷ್ಟು ತೂಕ ಎತ್ತುವ ಸಾಮರ್ಥ್ಯ ಪ್ರತಿ ರೋಬೊಟ್‌ಗೆ ಇರಲಿದೆ. ಮುಖದ ಬದಲಿಗೆ ಡಿಸ್ಪ್ಲೇ ಸ್ಕ್ರೀನ್ ಒಂದನ್ನು ಈ ರೋಬೊಟ್ ಹೊಂದಬಲ್ಲದು.

ಈ ರೋಬೊಟ್‌ಗಳು ಮಾನವರು ಮಾಡಲು ಕಷ್ಟಪಡುವ ಅನೇಕ ದೈಹಿಕ ಕೆಲಸಗಳನ್ನು ಮಾಡಲಿದೆ ಎಂದಿದ್ದಾರೆ ಮಸ್ಕ್.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...