ಪ್ರಧಾನಿ ನರೇಂದ್ರ ಮೋದಿ ಜಾಗತಿಕ ಮಟ್ಟದಲ್ಲಿಯೂ ಪ್ರಭಾವಿ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದಾರೆ. ಜನಪ್ರಿಯತೆಯಲ್ಲಿ ಅಮೆರಿಕ ಅಧ್ಯಕ್ಷರನ್ನೂ ಹಿಂದಿಕ್ಕಿರುವ ನರೇಂದ್ರ ಮೋದಿಯವರು ಮೊದಲ ಸ್ಥಾನದಲ್ಲಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸಂಖ್ಯೆಯಲ್ಲಿ ಅನುಯಾಯಿಗಳನ್ನ ಹೊಂದಿರುವ ನರೇಂದ್ರ ಮೋದಿ ಅವರ ಪಟ್ಟಿಗೆ ಈಗ ಟೆಸ್ಲಾ ಸಿಇಓ ಎಲಾನ್ ಮಸ್ಕ್ ಕೂಡ ಸೇರ್ಪಡೆಯಾಗಿದ್ದಾರೆ. ಟ್ವಿಟರ್ ನಲ್ಲಿ ಎಲಾನ್ ಮಸ್ಕ್, ಮೋದಿ ಅವರನ್ನು ಫಾಲೋ ಮಾಡಲು ಆರಂಭಿಸಿದ್ದಾರೆ.
ಇತ್ತೀಚೆಗಷ್ಟೇ ಟ್ವಿಟರ್ ಖರೀದಿಸಿದ್ದ ಎಲಾನ್ ಮಸ್ಕ್ ಈ ಮೈಕ್ರೋ ಬ್ಲಾಗಿಂಗ್ ವೇದಿಕೆಯಲ್ಲಿ 13.43 ಕೋಟಿ ಅನುಯಾಯಿಗಳನ್ನು ಹೊಂದಿದ್ದು, ಅವರು ಕೇವಲ 195 ಜನರ ಟ್ವಿಟರ್ ಖಾತೆ ಫಾಲೋ ಮಾಡುತ್ತಿದ್ದಾರೆ. ಈ ಪೈಕಿ ಪ್ರಧಾನಿ ಮೋದಿಯವರು ಕೂಡ ಒಬ್ಬರಾಗಿದ್ದು, ಭಾರತದಲ್ಲೂ ಟೆಸ್ಲಾ ಘಟಕ ಆರಂಭಿಸಲು ಎಲಾನ್ ಮಸ್ಕ್ ಮುಂದಾಗಿದ್ದಾರಾ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.