ಟ್ವಿಟರ್ ಗೆ ಹೊಸ ಸಿಇಓ ನೇಮಕವಾಗಿದ್ದಾರೆ. ಈ ಬಗ್ಗೆ ಟ್ವಿಟರ್ ಮುಖ್ಯಸ್ಥ ಇಲಾನ್ ಮಸ್ಕ್ ಘೋಷಣೆ ಮಾಡಿದ್ದಾರೆ. ಆದರೆ ಹೆಸರನ್ನು ಬಹಿರಂಗ ಪಡಿಸಿಲ್ಲ. ಈ ಬಗ್ಗೆ ಅಧಿಕೃತವಾಗಿ ಟ್ವೀಟ್ ಮಾಡಿರುವ ಇಲಾನ್ ಮಸ್ಕ್ “ನಾನು ಟ್ವಿಟರ್ ಗಾಗಿ ಹೊಸ CEO ಅನ್ನು ನೇಮಿಸಿಕೊಂಡಿದ್ದೇನೆ ಎಂದು ಘೋಷಿಸಲು ಉತ್ಸುಕನಾಗಿದ್ದೇನೆ.
ಅವರು 6 ವಾರಗಳಲ್ಲಿ ಕೆಲಸ ಪ್ರಾರಂಭಿಸುತ್ತಾರೆ. ನನ್ನ ಪಾತ್ರವು ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ಸಿಟಿಒ ಆಗಿ ಪರಿವರ್ತನೆಯಾಗುತ್ತದೆ, ಉತ್ಪನ್ನ, ಸಾಫ್ಟ್ ವೇರ್ ಮತ್ತು ಸಿಸೊಪ್‌ಗಳನ್ನು ನೋಡಿಕೊಳ್ಳುತ್ತೇನೆ”ಎಂದಿದ್ದಾರೆ.
ಸಿಇಓ ಸ್ಥಾನದಿಂದ ಕೆಳಗಿಳಿದು ಮುಖ್ಯ ತಂತ್ರಜ್ಞಾನ ಜವಾಬ್ದಾರಿ ವಹಿಸಿಕೊಂಡಿರುವ ಮಸ್ಕ್ , ಹೊಸ ಸಿಇಓ ಹೆಸರು ಘೋಷಿಸದಿದ್ರೂ ಅವರು ಮಹಿಳೆ ಎಂಬುದು ಗೊತ್ತಾಗಿದೆ.
ಇತ್ತೀಚಿಗೆ ಇಲಾನ್ ಮಸ್ಕ್ ನಾನು ಟ್ವಿಟರ್ ಸಿಇಓ ಸ್ಥಾನದಿಂದ ಕೆಳಗಿಳಿಯಬೇಕೆ ಎಂದು ಪ್ರಶ್ನಿಸಿ ಸಮೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿದ್ರು. ಅದರಲ್ಲಿ ಹೆಚ್ಚಿನ ಮಂದಿ ತಾವು ಸಿಇಓ ಸ್ಥಾನದಿಂದ ಕೆಳಗಿಳಿಯಬೇಕೆಂದು ಬಯಸಿದ್ದರು.
ಕೆಲಸವನ್ನು ತೆಗೆದುಕೊಳ್ಳುವಷ್ಟು ಮೂರ್ಖರನ್ನು ನಾನು ಕಂಡುಕೊಂಡ ತಕ್ಷಣ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಮಸ್ಕ್ ಘೋಷಿಸಿದ್ದರು.
ಕಳೆದ ವರ್ಷ ಅಕ್ಟೋಬರ್ ನಲ್ಲಿ ಟ್ವಿಟರ್ ಖರೀದಿಸಿದ ಮಸ್ಕ್ ಸಿಇಒ ಆಗಿ ಪದೇ ಪದೇ ವಿವಾದವನ್ನು ಹೊಂದಿದ್ದಾರೆ.