ಟೆಸ್ಲಾ ಕಂಪನಿ ಮುಖ್ಯಸ್ಥ, ಶತಕೋಟ್ಯಧಿಪತಿ ಉದ್ಯಮಿ ಎಲೋನ್ ಮಸ್ಕ್, “10 ವರ್ಷಗಳಲ್ಲಿ ಮಂಗಳ ಗ್ರಹಕ್ಕೆ ಮನುಷ್ಯನನ್ನು ಕಳುಹಿಸುವೆ” ಎಂದು 2011 ರಲ್ಲಿ ಭರವಸೆ ನೀಡಿದರು, ಈಗ 2022. ಹೀಗಾಗಿ ದಶಕದ ನಂತರ ನೆಟಿಗ್ಗರು ಈ ಭರವಸೆ ಏನಾಯಿತು ಎಂದು ಮಸ್ಕ್ ಅವರನ್ನು ಸಾಮಾಜಿಕ ತಾಣಗಳಲ್ಲಿ ಪ್ರಶ್ನಿಸಲಾರಂಭಿಸಿದ್ದಾರೆ. ವಾಲ್ ಸ್ಟ್ರೀಟ್ ಜರ್ನಲ್‌ನಲ್ಲಿ ಈ ಸಂದರ್ಶನವು 2011ರ ಏಪ್ರಿಲ್ ತಿಂಗಳಲ್ಲಿ ಪ್ರಕಟವಾಗಿತ್ತು.
ನೆಟ್ಟಿಗರ ಪ್ರಶ್ನೆಗೆ ಮಸ್ಕ್ ಉತ್ತರ ಹೀಗಿತ್ತು – “ಬೇಗನೆ ಎಂದರೆ, 10 ವರ್ಷಗಳು. ಅನಿವಾರ್ಯ ಮತ್ತು ವಿಳಂಬ ಪರಿಸ್ಥಿತಿಯಲ್ಲಿ, 15 ರಿಂದ 20 ವರ್ಷಗಳು ಬೇಕಾಗಬಹುದು”
ಟ್ವಿಟರ್ ಬಳಕೆದಾರರು ವಾಲ್‌ಸ್ಟ್ರೀಟ್ ಜರ್ನಲ್‌ನ ಸಂದರ್ಶನದ ಆಯ್ದ ಭಾಗವನ್ನು ಶೇರ್ ಮಾಡಿದ್ದಾರೆ. “10 ವರ್ಷಗಳಲ್ಲಿ ಮನುಷ್ಯನನ್ನು ಮಂಗಳ ಗ್ರಹಕ್ಕೆ ಕರೆದೊಯ್ಯುವೆ” ಎಂದು ಮಸ್ಕ್ ಹೇಳಿದ ಅಂಶವಿದೆ. ಇದು ಕೆಲವೇ ಗಂಟೆಗಳಲ್ಲಿ 37.9K ಲೈಕ್ಸ್ ಪಡೆದಿದೆ.
ಏತನ್ಮಧ್ಯೆ, ಮಸ್ಕ್ ಅವರು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಸ್ಪೇಸ್ ಎಕ್ಸ್ ಆರಂಭಿಸಿ 10 ವರ್ಷ ಆಯಿತು ಎಂಬುದನ್ನು ಮತ್ತು ಎಲ್‌ಜಿಬಿಟಿಕ್ಯೂ ಸಮಾನತೆ ವಿಚಾರದಲ್ಲಿ ಕಳೆದ ಏಳು ವರ್ಷಗಳಿಂದ ಟೆಸ್ಲಾ ಶೇಕಡ 100 ಅಂಕ ಗಳಿಸಿದೆ ಎಂಬ ಪೋಸ್ಟ್‌ಗಳನ್ನು ಹಾಕಿ ಗಮನಸೆಳೆದರು.