ಟೆಕ್ ಲೋಕದ ದೈತ್ಯ ಎಲೋನ್ ಮಸ್ಕ್ ತನ್ನ ಜೆಟ್‌ಗಳ ಕುರಿತು ಟ್ವೀಟ್ ಮಾಡುವುದನ್ನು ನಿಲ್ಲಿಸಲು ಜ್ಯಾಕ್ ಎಂಬ 19 ವರ್ಷದ ಟೀನೇಜರ್‌ಗೆ $5,000 (ಅಂದಾಜು ರೂ. 3.75 ಲಕ್ಷ) ಆಫರ್ ಕೊಟ್ಟಿದ್ದಾರೆ.
ತನ್ನ ಖಾಸಗಿ ಜೆಟ್‌ನ ಸ್ಥಳವನ್ನು ಟ್ರ್ಯಾಕ್ ಮಾಡಿದ ಟ್ವಿಟರ್ ಖಾತೆಯನ್ನು ತೆಗೆದುಹಾಕಲು 19 ವರ್ಷದ ಯುವಕನಿಗೆ $5,000ಗಳನ್ನು ಮಸ್ಕ್ ನೀಡಿದ್ದಾರೆ ಎಂದು ವರದಿಯಾಗಿದೆ.
ಸ್ವಪಕ್ಷೀಯ ಶಾಸಕರ ವಿರುದ್ಧವೇ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ
ಟೆಸ್ಲಾ ಸಿಇಓ ಅವರು ಟ್ವಿಟರ್ ಬಳಕೆದಾರರ @ElonJet, ಜ್ಯಾಕ್ ಸ್ವೀನಿ ಅವರನ್ನು ಡಿಎಂಗಳ ಮೂಲಕ ತಲುಪಿ ಟೀನೇಜರ್‌ಗೆ ಹೀಗೊಂದು ಆಫರ್ ಇಟ್ಟಿದ್ದಾರೆ ಎನ್ನಲಾಗಿದೆ.
ಈ ಕಾಲೇಜು ವಿದ್ಯಾರ್ಥಿಯು ಎಲೋನ್ ಮಸ್ಕ್ ಅವರ ಖಾಸಗಿ ಜೀವನ ಮತ್ತು ಇತರ ಅನೇಕ ಉನ್ನತ ವ್ಯಕ್ತಿಗಳ ಮೇಲೆ ಆನ್ಲೈನ್ ಮೂಲಕ ಒಂದು ಕಣ್ಣಿಟ್ಟಿದ್ದಾನೆ.
ಆದಾಗ್ಯೂ, ಜ್ಯಾಕ್, ಎಲೋನ್ ಮಸ್ಕ್ ಅವರ ಪ್ರಸ್ತಾಪವನ್ನು ತಿರಸ್ಕರಿಸಿದ್ದು, ಬದಲಿಗೆ $50,000 (ರೂ. 37.55 ಲಕ್ಷ) ಗೆ ಬೇಡಿಕೆ ಪಡೆದಿದ್ದಾನೆ. ಆ ಮೊತ್ತವು ತನ್ನ ಕಾಲೇಜು ಶುಲ್ಕ ಭರಿಸುವುದರೊಂದಿಗೆ ಟೆಸ್ಲಾ ಕಾರನ್ನು ಖರೀದಿಸಲು ಸಹಾಯ ಮಾಡುತ್ತದೆ ಎಂದು ಜ್ಯಾಕ್ ಹೇಳುತ್ತಾನೆ.
ಸುದ್ದಿತಾಣ ಪ್ರೋಟೋಕಾಲ್ ಪ್ರಕಾರ, ಜ್ಯಾಕ್ ರಚಿಸಿದ 15 ಫ್ಲೈಟ್-ಟ್ರ್ಯಾಕಿಂಗ್ ಖಾತೆಗಳಲ್ಲಿ @ElonJet (ಎಲೋನ್ ಮಸ್ಕ್‌ರ ಜೆಟ್) ಸಹ ಒಂದಾಗಿದೆ. ಈ ಖಾತೆಯು ಬಾಟ್‌ಗಳಿಂದ ನಡೆಸಲ್ಪಟ್ಟಿದ್ದು ಅವರು ಪ್ರತಿ ಬಾರಿ ವಿಮಾನಗಳು ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಆಗುವುದನ್ನು ಟ್ರ್ಯಾಕ್ ಮಾಡಲು ಪ್ರೋಗ್ರಾಮ್ ಮಾಡಲಾಗಿದೆ.
ಎಲೋನ್ ಮಸ್ಕ್‌ರ ಖಾಸಗಿ ಜೆಟ್‌ಗಳನ್ನು ಮಾತ್ರವಲ್ಲದೆ ಬಿಲ್ ಗೇಟ್ಸ್ ಮತ್ತು ಜೆಫ್ ಬೆಜೋಸ್ ಸೇರಿದಂತೆ ಅನೇಕ ದೊಡ್ಡ ವ್ಯಕ್ತಿಗಳ ಟ್ರ್ಯಾಕ್ ಮಾಡುತ್ತಿದ್ದಾನೆ ಈ ಚಾಣಾಕ್ಷ ಟೀನೇಜರ್. ಆದಾಗ್ಯೂ, ವಿಶೇಷವಾಗಿ ಎಲೋನ್ ಮಸ್ಕ್ ಅವರ ವಿಮಾನಗಳನ್ನು ಟ್ರ್ಯಾಕ್ ಮಾಡುವ ‘ಎಲೋನ್ಜೆಟ್’ ಖಾತೆಯು 83000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದೆ.
ವರದಿಗಳ ಪ್ರಕಾರ, ಸ್ಪೇಸ್‌ಎಕ್ಸ್ ಸಂಸ್ಥಾಪಕರು ಜ್ಯಾಕ್ ಕೇಳಿದ ಮೊತ್ತವನ್ನು ಪಾವತಿಸಲು ಒಪ್ಪಿಕೊಂಡರೂ ಸಹ ಇದುವರೆಗೆ ಜ್ಯಾಕ್‌ಗೆ ಈವರೆಗೆ ಹಣ ಪಾವತಿಸಿಲ್ಲವೆನ್ನಲಾಗಿದೆ.
@ElonJet ಮತ್ತು ಇತರ ಖಾತೆಗಳಿಂದ ಸಾಕಷ್ಟು ಪ್ರಯೋಜನ ಪಡೆದಿರುವುದಾಗಿ ತಿಳಿಸಿದ ಜ್ಯಾಕ್, ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಅನುಯಾಯಿಗಳನ್ನು ಹೊಂದಿದ್ದಾನೆ. ಕೋಡ್ ಮಾಡುವುದು ಹೇಗೆಂದು ಕಲಿತು ಊಬರ್‌ಜೆಟ್ಸ್‌ನಲ್ಲಿ ಅಪ್ಲಿಕೇಶನ್ ಡೆವಲಪರ್ ಆಗಿ ಅರೆಕಾಲಿಕ ಕೆಲಸವನ್ನು ಸಹ ಪಡೆದಿದ್ದಾನೆ ಜ್ಯಾಕ್. ಇಷ್ಟು ವರ್ಷಗಳ ಕಾಲ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಬೆಳೆಸಿಕೊಂಡು ಬಂದಿರುವ ವ್ಯಕ್ತಿಯೊಂದಿಗೆ ಸಂಭಾಷಿಸಲು ಅವಕಾಶ ಸಿಕ್ಕಿರುವುದು ಸಂತಸ ತಂದಿದೆ ಎನ್ನುತ್ತಾನೆ ಜ್ಯಾಕ್.