alex Certify BIG NEWS: ಒಂದೇ ಒಂದು ʼಟ್ವೀಟ್‌ʼ ನಿಂದಾಗಿ ಕ್ಷಣಾರ್ಧದಲ್ಲೇ ಕರಗಿತು ವಿಶ್ವದ ಅತಿ ಸಿರಿವಂತನ ಸಂಪತ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಒಂದೇ ಒಂದು ʼಟ್ವೀಟ್‌ʼ ನಿಂದಾಗಿ ಕ್ಷಣಾರ್ಧದಲ್ಲೇ ಕರಗಿತು ವಿಶ್ವದ ಅತಿ ಸಿರಿವಂತನ ಸಂಪತ್ತು

ಟೆಸ್ಲಾ ಸಿಇಓ ಎಲಾನ್​ ಮಸ್ಕ್​ ಬ್ಲೂಮ್​ಬರ್ಗ್​ನ ವಿಶ್ವದ ಶ್ರೀಮಂತ ವ್ಯಕ್ತಿಯ ಪಟ್ಟಿಯಲ್ಲಿ ಮತ್ತೆ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಟೆಸ್ಲಾ ಷೇರುಗಳು ಸೋಮವಾರ 8.6 ಪ್ರತಿಶತಕ್ಕೆ ಕುಸಿದ ಬಳಿಕ ನಿವ್ವಳ ಮೌಲ್ಯವು ಒಂದೇ ದಿನದಲ್ಲಿ 15.2 ಬಿಲಿಯನ್​ ಡಾಲರ್​​ ಇಳಿಕೆ ಕಂಡಿದೆ. ಈ ಮೂಲಕ ಅಮೆಜಾನ್​ ಸಂಸ್ಥಾಪಕ ಜೆಫ್​ ಬೆಜೋಸ್​​ ಬ್ಲೂಮ್​ ಬರ್ಗ್​ ಬಿಲಿಯನೇರ್​ ಸೂಚ್ಯಂಕದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.

ಸೆಪ್ಟೆಂಬರ್​ 2020ರ ಬಳಿಕ ಟೆಸ್ಲಾ ಇದೇ ಮೊದಲ ಬಾರಿಗೆ ಸೋಮವಾರ ಅತಿ ದೊಡ್ಡ ಪ್ರಮಾಣದಲ್ಲಿ ಕುಸಿತ ಕಂಡಿದೆ. ಟೆಸ್ಲಾ ಮೌಲ್ಯದಲ್ಲಿನ ಕುಸಿತವು ಶನಿವಾರ ಮಸ್ಕ್​ರ ಕಮೆಂಟ್​ಕಾರಣವಾಗಿದೆ.

ಈ ಹಿಂದೆ ಎಲಾನ್​ ಮಸ್ಕ್​ ಮುಟ್ಟುತ್ತಿದ್ದಂತೆಯೇ ಬಿಟ್​ ಕಾಯಿನ್​ಗಳ ಬೆಲೆ 58 ಸಾವಿರ ಡಾಲರ್​ಗೆ ಏರಿಕೆ ಕಂಡಿತ್ತು. ಆದರೆ ಅವರ ಒಂದೇ ಒಂದು ಟ್ವೀಟ್​ನಿಂದಾಗಿ ಈ ಬಿಟ್​ ಕಾಯಿನ್​ ಬೆಲೆ 50 ಸಾವಿರ ಡಾಲರ್​ಗೆ ಕುಸಿತ ಕಂಡಿದೆ. ಇದು ಎಲಾನ್​ ಮಸ್ಕ್​ರ ಒಂದು ಕಮೆಂಟ್​ನಿಂದಾಗಿ ಬಿಟ್​ ಕಾಯಿನ್ ಮೌಲ್ಯ ಕುಸಿದಿದೆ ಎನ್ನಲಾಗಿದೆ. ಮಸ್ಕ್,​ ಬಿಟ್​ಕಾಯಿನ್ ಬೆಲೆ ಹೆಚ್ಚಿದೆ ಎಂದು ಹೇಳುತ್ತಿದ್ದಂತೆಯೇ ಸೋಮವಾರ ಟೆಸ್ಲಾದ ಷೇರುಗಳು ಕುಸಿತ ಕಂಡಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...