ಇತ್ತೀಚೆಗಷ್ಟೇ ವಿಶ್ವ ಸಿರಿವಂತರ ಪಟ್ಟಿಯಲ್ಲಿ ಪ್ರಥಮ ಸ್ಥಾನಕ್ಕೆ ಏರಿದ್ದ ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ಕೇವಲ 48 ಗಂಟೆಗಳ ಅಂತರದಲ್ಲಿ ಎರಡನೇ ಸ್ಥಾನಕ್ಕೆ ಬಂದಿದ್ದಾರೆ. 1.9 ಬಿಲಿಯನ್ ಡಾಲರ್ ಕಳೆದುಕೊಂಡ ಬಳಿಕ ಅವರ ಆಸ್ತಿಯಲ್ಲಿ ಇಳಿಕೆಯಾಗಿದೆ.
ಫಾರ್ಚುನ್ ವರದಿಯ ಪ್ರಕಾರ ಈ ಮೊದಲು 187.1 ಬಿಲಿಯನ್ ಡಾಲರ್ ಆಸ್ತಿ ಮೌಲ್ಯದೊಂದಿಗೆ ಎಲಾನ್ ಮಸ್ಕ್ ಮೊದಲ ಸ್ಥಾನದಲ್ಲಿದ್ದರು. ಎರಡನೇ ಸ್ಥಾನದಲ್ಲಿ ಫ್ರೆಂಚ್ ಸಿರಿವಂತ ಬೆರ್ನಾಡ್ ಅರ್ನಾಲ್ಟ್ ಇದ್ದು ಅವರ ಆಸ್ತಿ ಮೌಲ್ಯ 186 ಬಿಲಿಯನ್ ಡಾಲರ್ಗಳಾಗಿತ್ತು.
ಬುಧವಾರದಂದು ಎಲಾನ್ ಮಸ್ಕ್ ಅವರ ಕಂಪನಿಗಳ ಷೇರುಗಳ ಬೆಲೆಯಲ್ಲಿ ಇಳಿಕೆ ಕಂಡು ಬಂದ ಕಾರಣ ಅವರು 1.9 ಬಿಲಿಯನ್ ಡಾಲರ್ ನಷ್ಟವನ್ನು ಅನುಭವಿಸಿದ್ದರು. ಹೀಗಾಗಿ ಅವರ ಆಸ್ತಿ ಮೌಲ್ಯ 186 ಬಿಲಿಯನ್ ಡಾಲರ್ಗಳಿಗಿಂತ ಕೆಳಗೆ ಬಂದಿತ್ತು. ಹೀಗಾಗಿ ಎಲಾನ್ ಮಸ್ಕ್ ಎರಡನೇ ಸ್ಥಾನದಲ್ಲಿದ್ದು, ಬೆರ್ನಾಡ್ ಅರ್ನಾಲ್ಟ್ ಮೊದಲ ಸ್ಥಾನಕ್ಕೆ ಬಂದಿದ್ದಾರೆ.