ಎಲೋನ್ ಮಸ್ಕ್ ಅವರು ಟ್ವಿಟರ್ ಅನ್ನು ಖರೀದಿ ಮಾಡಿದ ಮೇಲೆ ಸಹಸ್ರಾರು ಉದ್ಯೋಗಿಗಳನ್ನು ತೆಗೆದು ಹಾಕಿ ಸುದ್ದಿಯಾಗಿದ್ದರು. ಇದೀಗ ಮಾಜಿ ಐಫೋನ್ ಹ್ಯಾಕರ್ ಜಾರ್ಜ್ ಹಾಟ್ಜ್ ಅವರನ್ನು ನೇಮಕ ಮಾಡಿಕೊಂಡಿದ್ದಾರೆ.
ಹಿಂದೆ ಟೆಸ್ಲಾದಲ್ಲಿ ಕೆಲಸವನ್ನು ನಿರಾಕರಿಸಿದ್ದಕ್ಕಾಗಿ ಈಗ 12 ವಾರಗಳವರೆಗೆ ಟ್ವಿಟರ್ ಇಂಟರ್ನ್ ಆಗಿ ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ.
ಟ್ವಿಟರ್ನಲ್ಲಿ ಇರುವ ಕೆಲವೊಂದು ಅನಗತ್ಯ ಎನಿಸಿರುವ ಗೊಂದಲಗಳನ್ನು ನಿವಾರಣೆ ಮಾಡಿ, ಟ್ವಿಟರ್ ಪ್ಲಾಟ್‌ಫಾರ್ಮ್ ಅನ್ನು ವಿಶೇಷ ರೀತಿಯಲ್ಲಿ ತಯಾರು ಮಾಡಲು ಇವರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಮಸ್ಕ್ ಹೇಳಿದ್ದಾರೆ.
ಟ್ವಿಟರ್ನಲ್ಲಿ ಹುಡುಕಾಟ ವೈಶಿಷ್ಟ್ಯವನ್ನು ಸರಿಪಡಿಸಲು ಮತ್ತು ಬಳಕೆದಾರರು ಲಾಗ್ ಇನ್ ಮಾಡದೆಯೇ ವೆಬ್ ಮೂಲಕ ಟ್ವಿಟರ್ ಅನ್ನು ಬ್ರೌಸ್ ಮಾಡಲು ಪ್ರಯತ್ನಿಸುತ್ತಿದ್ದರೆ ಕಾಣಿಸಿಕೊಳ್ಳುವ ಕೆಲವೊಂದು ಕುಂದುಕೊರತೆಗಳನ್ನು ಸರಿ ಮಾಡಲು ಇವರ ನೇಮಕಾತಿ ನಡೆದಿದೆ ಎಂದು ಮಾಹಿತಿಯನ್ನು ಅವರು ನೀಡಿದ್ದಾರೆ.
https://twitter.com/realGeorgeHotz/status/1592955427179765760?ref_src=twsrc%5Etfw%7Ctwcamp%5Etweetembed%
https://twitter.com/realGeorgeHotz/status/1594906882027552773?ref_src=twsrc%5Etfw%7Ctwcamp%5Etweetembed%7Ctwterm%5E1594906882027552773%7Ctwgr%5Ec19e5b5ce891918cf753d1339bd1aff74c6ce727%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Felon-musk-hires-famous-iphone-hacker-to-fix-broken-twitter-search-in-12-weeks-6450019.html