ಚಾಮರಾಜನಗರ: ವಿದ್ಯುತ್ ಸ್ವಿಚ್ ಬೋರ್ಡ್ ಸ್ಪರ್ಶಿಸಿ 11 ತಿಂಗಳ ಕಂದಮ್ಮ ಮೃತಪಟ್ಟ ದಾರುಣ ಘಟನೆ ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ವೈ.ಕೆ.ಮೋಳೆ ಗ್ರಾಮದಲ್ಲಿ ನಡೆದಿದೆ.
ಮನೆಯಲ್ಲಿ ನೆಲದ ಮೇಲೆ ಇಟ್ಟಿದ್ದ ಸ್ವಿಚ್ ಬೋರ್ಡ್ ಗೆ ಕೈ ಹಾಕಿದ ಮಗು ವಿದ್ಯುತ್ ತಗುಲಿ ಸ್ಥಳದಲ್ಲೇ ಮೃತಪಟ್ಟಿದೆ. ಮಗುವನ್ನು ರಕ್ಷಿಸಲು ಹೋದ ತಾಯಿಗೂ ಕರೆಂಟ್ ಹೊಡೆದಿದೆ.
ಲಕ್ಷ್ಮಿ ಹಾಗೂ ರಂಗಸ್ವಾಮಿ ದಂಪತಿಯ 11 ತಿಂಗಳ ಮಗು ಮೃತ ಕಂದಮ್ಮ. ಅಸ್ವಸ್ಥಗೊಂಡ ತಾಯಿ ಲಕ್ಷ್ಮಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.