ಗಾಢ ನಿದ್ರೆಯಲ್ಲಿದ್ದಾಕೆಯನ್ನು ಆನೆಯೊಂದು ಕಿಟಕಿಯಿಂದ ಸೊಂಡಿಲು ತೂರಿಸಿ ಎಬ್ಬಿಸಿ ಗಾಬರಿ ಬೀಳುಸುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಂಟೆಂಟ್ ಕ್ರಿಯೇಟರ್ ಸಾಕ್ಷಿ ಜೈನ್ ಅವರು ಥೈಲ್ಯಾಂಡ್‌ನಲ್ಲಿ ವಿಹಾರಕ್ಕೆ ತೆರಳಿದ್ದು, ಅವರು ಚಿಯಾಂಗ್ ಮಾಯ್‌ನಲ್ಲಿರುವ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಅಲ್ಲಿ ವೆಲ್ಕಂ ಕಾಲ್ ಅಥವಾ ಅಲಾರಾಂ ವ್ಯವಸ್ಥೆ ಅಲ್ಲ, ಬದಲಿಗೆ ಆನೆಯ ಅಲರಾಂ ಕೆಲಸ ಮಾಡುತ್ತದೆ.
ತನ್ನ ಕೊಠಡಿಯಲ್ಲಿ ಗಾಢ ನಿದ್ದೆಯಲ್ಲಿದ್ದ ಸಾಕ್ಷಿಯವರನ್ನು ಅನೆಯೊಂದು ಎಬ್ಬಿಸುವ ವಿಡಿಯೋವನ್ನು ಜಾಲತಾಣದಲ್ಲಿ ನೋಡಬಹುದಾಗಿದೆ. ರೂಂ ಹೊರಗೆ ನಿಂತಿದ್ದ ಆನೆ ಕಿಟಕಿಯ ಮೂಲಕ ಸೊಂಡಿಲನ್ನು ಒಳಗೆ ಹಾಕಿ ಆಕೆಯನ್ನು ಎಬ್ಬಿಸುತ್ತದೆ. ಗಾಢ ನಿದ್ರೆಯಲ್ಲಿದ್ದಾಕೆ ಒಮ್ಮೆ ಗಾಬರಿ ಬೀಳುತ್ತಾರೆ.
ಕಳೆದ ವಾರ ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, 51 ಮಿಲಿಯನ್‌ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಥೈಲ್ಯಾಂಡ್‌ನ ಚಿಯಾಂಗ್ ಮಾಯ್‌ನಲ್ಲಿರುವ ಈ ರೆಸಾರ್ಟ್‌ನಲ್ಲಿ ಅಲಾರಂಗಳ ಬದಲಿಗೆ ಆನೆ ಎಬ್ಬಿಸುತ್ತದೆ. ಆನೆಗಳೊಂದಿಗೆ ಹೆಜ್ಜೆ ಹಾಕಬಹುದು, ಆನೆಗಳಿಗೆ ಆಹಾರ ತಿನ್ನಿಸಬಹುದು, ಸ್ನಾನ ಕೂಡ ಮಾಡಿಸಬಹುದು. ಆಟವನ್ನೂ ಆಡಬಹುದು. ಈ ಅನುಭವ ಬೇರೆಯೇ. ಆದ್ದರಿಂದ ಮುಂದಿನ ಬಾರಿ ಥೈಲ್ಯಾಂಡ್ ಪ್ರವಾಸದ ಪ್ಲಾನ್ ಮಾಡಿದ್ದರೆ ಆನೆಗಳಿಂದ ತುಂಬಿರುವ ಚಿಯಾಂಗ್‌ಮೈ ನಗರಕ್ಕೆ ಭೇಟಿಕೊಡಿ ಎಂದು ವಿಡಿಯೋದಲ್ಲಿದೆ.