ಬಾಲ್ಯದಲ್ಲಿ ತನಗೆ ಆಶ್ರಯ ನೀಡಿದ್ದ ರಕ್ಷಣಾ ಕೇಂದ್ರಕ್ಕೆ ಹೆಣ್ಣು ಆನೆಯೊಂದು ತನ್ನ ಮರಿಯನ್ನು ಕರೆದುಕೊಂಡು ಬಂದ ಘಟನೆಯ ವಿಡಿಯೋ ನೆಟ್ಟಿಗರ ಹೃದಯ ಮುಟ್ಟಿದೆ.
ಶೆಲ್ಡ್ರಿಕ್ ವೈಲ್ಡ್‌ಲೈಫ್ ಟ್ರಸ್ಟ್ ಹೆಸರಿನ ಪ್ರೊಫೈಲ್ ಇನ್ಸ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ ವಿಡಿಯೋದಲ್ಲಿ ಈ ಹೆಣ್ಣಾನೆ ತನ್ನ ಮುದ್ದಾದ ಮರಿಗಳೊಂದಿಗೆ ನಿಂತಿರುವುದನ್ನು ನೋಡಬಹುದು.
ರತನ್ ಟಾಟಾ ಆತ್ಮಚರಿತ್ರೆ ಬರೆಯಲಿರುವ ನಿವೃತ್ತ ಐಎಎಸ್ ಅಧಿಕಾರಿ
ತಾನು ಎರಡು ವಾರಗಳ ಮರಿಯಾಗಿದ್ದ ವೇಳೆ ನೀರಿನ ಗುಂಡಿಯೊಂದರಿಂದ ರಕ್ಷಿಸಲ್ಪಟ್ಟಿದ್ದ ಇಲ್ಚೋಟಾ ಹೆಸರಿನ ಈ ಹೆಣ್ಣಾನೆಯನ್ನು ಅದೇ ರಕ್ಷಣಾ ಕೇಂದ್ರದಲ್ಲಿ ಸಾಕಿ ಸಲಹಲಾಗಿತ್ತು. ಈ ನರ್ಸರಿಯಲ್ಲಿ ತನ್ನ ಬಾಲ್ಯದ ದಿನಗಳನ್ನು ಕಳೆದ ಇಲ್ಚೋಟಾ ಬಳಿಕ ಕಾಡಿಗೆ ಹೋಗಿ ಅಲ್ಲಿನ ಬದುಕಿಗೆ ರೂಢಿಯಾಗಿದ್ದಳು.
2016ರಲ್ಲಿ ಮೊದಲ ಬಾರಿಗೆ ಇಲ್ಚೋಟಾ ತಾಯಿಯಾಗಿದ್ದು, ಇದೀಗ ಆಕೆಗೆ ಜನಿಸಿದ ಮತ್ತೊಂದು ಮರಿಗೆ ಇಜ್ಝಿ ಎಂದು ಹೆಸರಿಡಲಾಗಿದೆ.