ಮನುಷ್ಯರು ಹಾಗೂ ಕೆಲವು ಪ್ರಾಣಿಗಳ ನಡುವೆ ಒಳ್ಳೆಯ ಬಾಂಡಿಂಗ್ ಇರುತ್ತದೆ. ಮನುಷ್ಯರ ಮಾತುಗಳನ್ನು, ಅವರ ಬಾಡಿ ಲಾಂಗ್ವೆಜ್ಗಳನ್ನು ಅರ್ಥೈಸಿಕೊಳ್ಳುವ ಸ್ವಭಾವ ಇದೆ. ಇದರಲ್ಲಿ ಆನೆ ಕೂಡ ಸೇರಿದೆ.
ಆನೆಯು ತನ್ನ ಕಿವಿಗಳನ್ನು ಅಲ್ಲಾಡಿಸುವ ಮೂಲಕ ತನ್ನೆದುರು ನೃತ್ಯ ಮಾಡುವ ಹುಡುಗಿಯನ್ನು ಅನುಕರಿಸುವ ವಿಡಿಯೋ ವೈರಲ್ ಆಗಿದ್ದು 7 ಮಿಲಿಯನ್ ವೀಕ್ಷಣೆಗಳೊಂದಿಗೆ ನೆಟ್ಟಿಗರ ಹೃದಯಗಳನ್ನು ಗೆದ್ದಿದೆ.
ಆನೆಗಳು ದೆೈತ್ಯ ಜೀವಿಯಾಗಿದ್ದರೂ ಅವುಗಳು ಸಾಮಾನ್ಯವಾಗಿ ಮನುಷ್ಯರೊಂದಿಗೆ ಪ್ರೀತಿಯಿಂದ ಸಂವಹನ ನಡೆಸುತ್ತವೆ. ಇದಕ್ಕೆ ಉದಾಹರಣೆಯಾಗಿ ಹಲವಾರು ವೀಡಿಯೋಗಳು ಕಾಣ ಸಿಗುತ್ತವೆ.
ಆನೆ ಮತ್ತು ಅದರ ಮಾವುತ ಹಾಗೂ ಹುಡುಗಿ ನಿಂತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ನಂತರ ಆ ಹುಡುಗಿ ಆನೆಯ ಮುಂದೆ ಡ್ಯಾನ್ಸ್ ಮಾಡಲು ಪ್ರಾರಂಭಿಸುತ್ತಾಳೆ, ಸಂತೋಷದಿಂದ ತನ್ನ ಕೈ ಮತ್ತು ಕಾಲುಗಳನ್ನು ಕುಣಿಸುತ್ತಾಳೆ.
ಅಚ್ಚರಿ ಎಂಬಂತೆ ಆನೆಯು ಅದೇ ರೀತಿ ನೃತ್ಯದ ಹೆಜ್ಜೆಗಳನ್ನು ಅನುಸರಿಸುವ ಮೂಲಕ ಹುಡುಗಿಯನ್ನು ಅನುಕರಿಸಲು ಪ್ರಾರಂಭಿಸುತ್ತದೆ. ಅದರಲ್ಲೂ ತನ್ನ ಕಿವಿಯ ಮೂಲಕ ಆ ಕೆಲಸ ಮಾಡುತ್ತಿದೆ. ಇದನ್ನು ನೋಡಿದ ನೆಟ್ಟಿಗರು ಆಶ್ಚರ್ಯಚಕಿತರಾಗಿ ಪ್ರತಿಕ್ರಿಯೆ ನೀಡಿದ್ದಾರೆ.