alex Certify ಸುಮ್ಮನಿದ್ದ ಆನೆಯನ್ನು ಹೊಡೆದು ಕೆರಳಿಸಿದ ಬಾಲಕ: ವೈರಲ್​ ವಿಡಿಯೋಗೆ ನೆಟ್ಟಿಗರ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಮ್ಮನಿದ್ದ ಆನೆಯನ್ನು ಹೊಡೆದು ಕೆರಳಿಸಿದ ಬಾಲಕ: ವೈರಲ್​ ವಿಡಿಯೋಗೆ ನೆಟ್ಟಿಗರ ಆಕ್ರೋಶ

ಕೆಲವರಿಗೆ ಪ್ರಾಣಿಗಳನ್ನು ಕಂಡಾಗ ಸುಮ್ಮನೆ ಹೊಡೆಯುವುದು, ಕಲ್ಲಿನಿಂದ ಹಿಂಸಿಸುವುದು ರೂಢಿ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ. ಹುಡುಗನೊಬ್ಬ ಆನೆಯನ್ನು ಓಡಿಸಲು ಕೋಲಿನಿಂದ ಹೊಡೆಯುವುದನ್ನು ಈ ವಿಡಿಯೋದಲ್ಲಿ ನೋಡಬಹುದು.

ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುರೇಂದರ್ ಮೆಹ್ರಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಶ್ರೀ ಮೆಹ್ರಾ ಭಾನುವಾರ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಆನೆಗಳ ಗುಂಪು ಬರುತ್ತಿರುವ ಸಂದರ್ಭದಲ್ಲಿ ಹುಡುಗನೊಬ್ಬ ಆನೆಯನ್ನು ಕೋಲಿನಿಂದ ಹೊಡೆಯುವುದನ್ನು ಇದರಲ್ಲಿ ನೋಡಬಹುದು.

ಆಗ ಕೋಪಗೊಂಡ ಆನೆಯು ಹುಡುಗನನ್ನು ಬೆನ್ನಟ್ಟುತ್ತದೆ ಆದರೆ ಅದೃಷ್ಟವಶಾತ್​ ಅದು ಅವನ ಮೇಲೆ ದಾಳಿ ಮಾಡಲಿಲ್ಲ. ನಂತರ ಯುವಕ ಮತ್ತು ಅವನ ಸ್ನೇಹಿತ ತಮ್ಮನ್ನು ರಕ್ಷಿಸಿಕೊಳ್ಳಲು ಸ್ಥಳದಿಂದ ಓಡಿ ಹೋದರು. ಹೀಗೆ ಪ್ರಾಣಿಗಳನ್ನು ಹಿಂಸಿಸುವುದು ಸರಿಯಲ್ಲ, ಅದೃಷ್ಟ ಕೆಟ್ಟರೆ ಪ್ರಾಣಕ್ಕೆ ಮುಳುವಾಗಬಹುದು ಎಂದು ಈ ವಿಡಿಯೋ ತೋರಿಸುತ್ತದೆ.

ಈ ಬಾಲಕನ ಕ್ರಮಕ್ಕೆ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸುಮ್ಮನೇ ಪ್ರಾಣಿಗಳನ್ನು ಹಿಂಸಿಸುವುದು, ಪ್ರತಿಯಾಗಿ ಅವು ದಾಳಿ ಮಾಡಿದರೆ ಅವುಗಳನ್ನು ಹೊಡೆದು ಸಾಯಿಸಲಾಗುತ್ತದೆ. ಮಕ್ಕಳಿಗೆ ಹಿರಿಯರು ಬುದ್ಧಿ ಹೇಳಬೇಕು ಎಂದು ಹಲವರು ಕಮೆಂಟ್​ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...