ಆನೆಯೊಂದು ಬಸ್‌ನತ್ತ ನುಗ್ಗಿಬಂದು ಆತಂಕ ಸೃಷ್ಟಿಸಿದ ಪ್ರಕರಣ ಕೇರಳದಲ್ಲಿ ನಡೆದಿದ್ದು, ಆನೆ ದಾಂಗುಡಿ ಇಡುವ ವಿಡಿಯೋ ವೈರಲ್ ಆಗಿದೆ. ಆ ಕ್ಲಿಪ್ ಅನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಂಗಳವಾರ ಮುನ್ನಾರ್ ಉಪ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಬಳಿ ಈ ಘಟನೆ ನಡೆದಿದೆ. ರಸ್ತೆಯಲ್ಲಿ ಆನೆ ನಡೆದುಕೊಂಡು ಹೋಗುವುದನ್ನು ನೋಡಿದ ಸರ್ಕಾರಿ ಬಸ್ ಚಾಲಕ ಬಸ್ ಬದಿಗೆ ನಿಲ್ಲಿಸಿದ್ದಾನೆ.
Sex Racket Busted: ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 10 ಮಂದಿ ಅರೆಸ್ಟ್, ಅದೇ ಮನೆಯಲ್ಲಿದ್ರು ವಿದ್ಯಾರ್ಥಿಗಳು
ಆದರೆ, ಕೆಲವೇ ಸೆಕೆಂಡ್‌ಗಳ ನಂತರ ಆನೆ ಬಸ್‌ನತ್ತ ಧಾವಿಸಿದಾಗ ಒಳಗಿದ್ದ ಪ್ರಯಾಣಿಕರು ಕೂಗಾಡಲು ಆರಂಭಿಸಿದರು. ಪ್ರಾಣಿಯು ಬಸ್‌ನ ವಿಂಡ್ ಷೀಲ್ಡ್ ಅನ್ನು ಸಹ ಒಡೆದುಹಾಕಿತು. ಆದರೂ ಚಾಲಕನು ತನ್ನ ಶಾಂತತೆಯನ್ನು ಕಳೆದುಕೊಳ್ಳಲಿಲ್ಲ.
ಬಸ್‌ನ ಒಳಗಿಂದ ಅನೇಕರು ಮೊಬೈಲ್‌ನಲ್ಲಿ ವಿಡಿಯೋ ಸಹ ತೆಗೆದುಕೊಳ್ಳುತ್ತಿದ್ದರು. ಆನೆ ಬಸ್‌ನ ಇನ್ನೊಂದು ಬದಿಗೆ ಬರುವುದನ್ನು ಗಮನಿಸಿದ ಚಾಲಕ ಬಸ್ಸನ್ನು ಮುಂದಕ್ಕೆ ಚಲಾಯಿಸಿ ಮುಂದಾಗಬಹುದಾಗಿದ್ದ ಅನಾಹುತ ತಪ್ಪಿಸಿದ್ದಾನೆ.
ಈ ವಿಡಿಯೋ ಗಮನಿಸಿದ ನೆಟ್ಟಿಗರು ಬಸ್ ಚಾಲಕನ ತಾಳ್ಮೆಯನ್ನು ಕೊಂಡಾಡಿದ್ದಾರೆ. ಒಬ್ಬರಂತೂ ಮಿಸ್ಟರ್ ಕೂಲ್ ಎಂದು ಬಿರುದು ಕೊಟ್ಟಿದ್ದಾರೆ.