
ಚಾಮರಾಜನಗರ: ಬಂಡಿಪುರ -ಊಟಿ ರಸ್ತೆಯಲ್ಲಿ ಹುಲಿ ದಾಳಿಗೆ ಮರಿಯಾನೆ ಸಾವು ಕಂಡಿದೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು ಬಂಡೀಪುರದಲ್ಲಿ ಘಟನೆ ನಡೆದಿದೆ.
ರಸ್ತೆಯಲ್ಲಿ ಮೃತಪಟ್ಟ ಮರಿಯಾನೆ ಬಳಿ ತಾಯಿ ಆನೆ ರೋಧಿಸತೊಡಗಿದೆ. ಇದರಿಂದಾಗಿ ರಸ್ತೆಯ ಎರಡೂ ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು, ಬಂಡೀಪುರ -ಊಟಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ರಸ್ತೆಯಲ್ಲಿ ರೋಧಿಸುತ್ತಿರುವ ತಾಯಿ ಆನೆ, ಮೃತ ಮರಿ ಆನೆ ತೆರವಿಗೆ ಅರಣ್ಯ ಇಲಾಖೆ ಸಿಬ್ಬಂದಿ ಪ್ರಯತ್ನ ನಡೆಸಿದ್ದಾರೆ.