ಬೆಂಗಳೂರು: ಕಾಡಾನೆ ದಾಳಿಗೆ ಫಾರೆಸ್ಟ್ ಗಾರ್ಡ್ ಬಲಿಯಾಗಿರುವ ಘಟನೆ ಆನೇಕಲ್ ನಲ್ಲಿ ನಡೆದಿದೆ.
45 ವರ್ಷದ ಮಾದಪ್ಪ ಆನೆ ದಾಳಿಗೆ ಬಲಿಯಾದ ಫಾರೆಸ್ಟ್ ಗಾರ್ಡ್. ಬನ್ನೇರುಘಟ್ಟ ಬಳಿಯ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ಘಟನೆ ನಡೆದಿದೆ.
ತಡರಾತ್ರಿ ಕಾಡಾನೆ ದಾಳಿ ನಡೆಸಿದ್ದು, ಆನೆ ದಾಳಿ ನಡೆಸಿರುವ ವಿಚಾರ ತಿಳಿದು ಫಾರೆಸ್ಟ್ ಗಾರ್ಡ್ ಆನೆ ಓಡಿಸಲು ಹೋಗಿದ್ದಾರೆ. ಈ ವೇಳೆ ಮಾದಪ್ಪನ ಮೇಲೆ ಆನೆ ದಾಳಿ ನಡೆಸಿದೆ.
ಗಂಭೀರವಾಗಿ ಗಾಯಗೊಂಡಿದ್ದ ಮಾದಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಳೆದ 6 ತಿಂಗಳಲ್ಲಿ ಒಂದೇ ಗ್ರಾಮದ ಮೂವರು ಆನೆ ದಾಳಿಗೆ ಬಲಿಯಾಗಿದ್ದಾರೆ. ಘಟನೆ ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.