ಹಾಸನ: ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಒಂಟಿಸಲಗದ ದಾಳಿಗೆ ಸಾಕಾನೆ ಅರ್ಜುನ ಮೃತಪಟ್ಟಿರುವ ದಾರುಣ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಬಳಿ ನಡೆದಿದೆ.
ಸಾಕಾನೆ ಅರ್ಜುನ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ 2019ರಲ್ಲಿ ಅಂಬಾರಿಯನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿತ್ತು. ಬರೋಬ್ಬರಿ 22 ವರ್ಷಗಳ ಕಾಲ ಜಂಬೂ ಸವಾರಿಯಲ್ಲಿ ಅರ್ಜುನ ಪಾಲ್ಗೊಂಡಿತ್ತು.
ಕಾಡಾನೆ ಸೆರೆ ಹಿಡಿದು ಸ್ಥಳಾಂತರ ಮಾಡುತ್ತಿದ್ದ ವೇಳೆ ಕಾಡಾನೆ ಹಾಗೂ ಸಾಕಾನೆಗಳ ನಡುವೆ ಕಾಳಗ ನಡೆದಿದ್ದು, ಒಂಟಿಸಲಗವೊಂದು ದಾಳಿ ಮಾಡಿದೆ. ಈ ವೇಳೆ ಇತರ ಮೂರು ಸಾಕಾನೆಗಳು ಓಡಿಹೋಗಿವೆ. ಅರ್ಜುನ ಆನೆ ಮಾತ್ರ ಒಂಟಿಯಾಗಿ ಕಾಡಾನೆ ಜೊತೆ ಸೆಣೆಸಾಡಿತ್ತು.
ಕಾಡಾನೆಗಳು ದಾಳಿ ನಡೆಸುತ್ತಿದ್ದಂತೆ ಅರ್ಜುನನ ಮೇಲಿದ್ದ ಮಾವುತರು ಜೀವ ಉಳಿಸಿಕೊಳ್ಳಲು ಕೆಳಗಿಳಿದು ಓಡಿದ್ದಾರೆ. ಬಳಿಕ ನಡೆದ ಕಡಾನೆಯ ಭೀಕರ ದಾಳಿಗೆ ಅರ್ಜುನ ಆನೆ ಸಾವನ್ನಪ್ಪಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.