alex Certify ಸಾರಿಗೆ ಇಲಾಖೆ ಕಟ್ಟಡಗಳಲ್ಲಿ ವಿದ್ಯುತ್ ಬಳಕೆ ಸಂಪೂರ್ಣ ಸ್ಥಗಿತಗೊಳಿಸಿ ಸೌರ ಶಕ್ತಿ ಬಳಕೆಗೆ ಯೋಜನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರಿಗೆ ಇಲಾಖೆ ಕಟ್ಟಡಗಳಲ್ಲಿ ವಿದ್ಯುತ್ ಬಳಕೆ ಸಂಪೂರ್ಣ ಸ್ಥಗಿತಗೊಳಿಸಿ ಸೌರ ಶಕ್ತಿ ಬಳಕೆಗೆ ಯೋಜನೆ

ಬೆಂಗಳೂರು: ಸಾರಿಗೆ ಇಲಾಖೆ ಕಟ್ಟಡಗಳಲ್ಲಿ ವಿದ್ಯುತ್ ಬಳಕೆ ಸ್ಥಗಿತಗೊಳಿಸಿ ಸೌರಶಕ್ತಿ ಬಳಕೆಗೆ ಯೋಜನೆ ರೂಪಿಸಲಾಗಿದೆ. ಹವಾಮಾನ ಬದಲಾವಣೆ ಮೇಲಿನ ಕ್ರಿಯಾ ಯೋಜನೆಯಡಿಯಲ್ಲಿ ಸಾರಿಗೆ ಇಲಾಖೆಯ ಎಲ್ಲಾ ಕಟ್ಟಡಗಳಲ್ಲಿಯೂ ನವೀಕರಿಸಬಹುದಾದ ಇಂಧನ ಬಳಸಲು ನಿರ್ಧರಿಸಲಾಗಿದೆ.

ಬದಲಾಗುತ್ತಿರುವ ಹವಾಮಾನ, ತಾಪಮಾನ ಏರಿಕೆಗೆ ಕಡಿವಾಣ ಹಾಕಲು ಕರ್ನಾಟಕ ಹವಾಮಾನ ಮೇಲಿನ ಯೋಜನೆ ರೂಪಿಸಲಾಗಿದೆ. ವಿವಿಧ ಇಲಾಖೆಗಳು ಹವಾಮಾನ ಬದಲಾವಣೆ ತಡೆಗೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ತಿಳಿಸಲಾಗಿದೆ. ಇದರಡಿಯಲ್ಲಿ ಸಾರಿಗೆ ಇಲಾಖೆ ಹವಮಾನ ವೈಪರೀತ್ಯ ನಿಯಂತ್ರಣಕ್ಕೆ ಕೊಡುಗೆ ನೀಡಲು ಹೊಸ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ.

ರಾಜ್ಯದಲ್ಲಿ ಇರುವ ಸಾರಿಗೆ ಇಲಾಖೆಯ ಸ್ವಂತ ಕಟ್ಟಡಗಳಿಗೆ ನವೀಕರಿಸಬಹುದಾದ ಇಂಧನ ಸೋಲಾರ್ ವಿದ್ಯುತ್ ಉತ್ಪಾದನಾ ಪ್ಯಾನೆಲ್ ಅಳವಡಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಎರಡು ತಿಂಗಳಲ್ಲಿ ಯೋಜನೆ ರೂಪಿಸಿ ಸರ್ಕಾರದಿಂದ ಅನುಮೋದನೆ ಪಡೆದು ಅನುಷ್ಠಾನಗೊಳಿಸಲಾಗುವುದು. ಬೆಂಗಳೂರಿನ ಕೇಂದ್ರ ಕಚೇರಿ ಸೇರಿ ರಾಜ್ಯಾದ್ಯಂತ 71 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಸೇರಿ ಇಲಾಖೆಗೆ ಸೇರಿದ ಇತರೆ ಕಚೇರಿಗಳು ಸ್ವಂತ ಕಟ್ಟಡದಲ್ಲಿದ್ದು, ಅವುಗಳ ಸೋಲಾರ್ ಪ್ಯಾನೆಲ್ ಅಳವಡಿಸಿ ವಿದ್ಯುತ್ ಉತ್ಪಾದಿಸಿ ಬಳಸಲಾಗುವುದು ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...