ಬೆಂಗಳೂರು: ವಿದ್ಯುತ್ ದರ ಹೆಚ್ಚಳಕ್ಕೆ ಕರ್ನಾಟಕ ವಿದ್ಯುತ್ ಚ್ಛಕ್ತಿ ನಿಯಂತ್ರಣ ಮಂಡಳಿಗೆ ವಿದ್ಯುತ್ ಸರಬರಾಜು ಕಂಪನಿಗಳು ಪ್ರಸ್ತಾವನೆ ಸಲ್ಲಿಸಿವೆ.
ಪ್ರತಿ ಯೂನಿಟ್ ಗೆ 49 ಪೈಸೆ ಹೆಚ್ಚಳ ಮಾಡುವಂತೆ ಬೆಸ್ಕಾಂ ಕೇಳಿದೆ. ಮೆಸ್ಕಾಂ ವತಿಯಿಂದ 59 ಪೈಸೆ ಹೆಚ್ಚಳಕ್ಕೆ ಕೋರಲಾಗಿದೆ. ಜೆಸ್ಕಾಂ 1.50 ರೂ. ಹೆಚ್ಚಳಕ್ಕೆ ಕೋರಿದ್ದು, ಹೆಸ್ಕಾಂ ಮತ್ತು ಸೆಸ್ಕ್ ಗಳು ದರ ಹೆಚ್ಚಳ ನಿರೀಕ್ಷೆ ಮಾಡಿಲ್ಲ.
ಫೆಬ್ರವರಿ 2ನೇ ವಾರದಿಂದ ಕರ್ನಾಟಕ ವಿದ್ಯುತ್ ಚ್ಛಕ್ತಿ ನಿಯಂತ್ರಣ ಮಂಡಳಿ ಅಧ್ಯಕ್ಷ ರವಿಕುಮಾರ್ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಅದಾಲತ್ ನಡೆಯಲಿದೆ. ಸದಸ್ಯ ಎಂ.ಡಿ. ರವಿ ಅದಾಲತ್ ನಲ್ಲಿ ಭಾಗವಹಿಸಲಿದ್ದು, ವಿದ್ಯುತ್ ದರ ಏರಿಕೆ ಬಗ್ಗೆ ಚರ್ಚೆ ನಡೆಯಲಿದೆ. ಎಸ್ಕಾಂಗಳು ಕಳೆದ ವರ್ಷ ಪ್ರತಿ ಯೂನಿಟ್ ಗೆ 1.50 ರೂ. ನಿಂದ 2 ರೂ. ಏರಿಕೆಗೆ ಕೋರಿದ್ದವು. ಈಗ ಮತ್ತೆ ಪ್ರಸ್ತಾವನೆ ಸಲ್ಲಿಸಲಾಗಿದೆ.