ಬೆಂಗಳೂರು : ರಾಜ್ಯದ ಜನತೆಗೆ ಸರ್ಕಾರವು ಮತ್ತೊಂದು ಶಾಕ್ ನೀಡಿದೆ. ಡಿಸೆಂಬರ್ ವಿದ್ಯುತ್ ಬಿಲ್ ನಲ್ಲಿ ಯೂನಿಟ್ ಗೆ 85 ಪೈಸೆ ಹೆಚ್ಚುವರಿ ಶುಲ್ಕ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕ 35 ಪೈಸೆ ವಿಧಿಸಲಾಗಿದೆ.
ಕಳೆದ ಜೂನ್ ನಲ್ಲಿ ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಅನ್ವಯವಾಗುವಂತೆ ಪ್ರತಿ ಯೂನಿಟ್ ಗೆ ಹೆಚ್ಚಳ ಮಾಡಲಾಗಿದ್ದ 50 ಪೈಸೆ ಶುಲ್ಕದೊಂದಿಗೆ ನವೆಂಬರ್ ತಿಂಗಳಿಗೆ ಸೀಮಿತವಾಗಿ 35 ಪೈಸೆ ಹೆಚ್ಚುವರಿ ಶುಲ್ಕ ವಿಧಿಸಲಾಗಿದೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ -ಬೆಸ್ಕಾಂ ವ್ಯಾಪ್ತಿಯ ವಿದ್ಯುತ್ ಗ್ರಾಹಕರಿಗೆ ವಿದ್ಯುತ್ ಶುಲ್ಕದ ಜೊತೆಗೆ ಡಿಸೆಂಬರ್ ಬಿಲ್ ನಲ್ಲಿ ಬರುವಂತೆ ನವೆಂಬರ್ ತಿಂಗಳ ಬಳಕೆಯ ವಿದ್ಯುತ್ ಮೇಲೆ ಪ್ರತಿ ಯೂನಿಟ್ ಗೆ 85 ಪೈಸೆ ಹೆಚ್ಚುವರಿಯಾಗಿ ಇಂಧನ ಹೊಂದಾಣಿಕೆ ವೆಚ್ಚ ನಿಗದಿ ಮಾಡಿ ಆದೇಶ ಹೊರಡಿಸಲಾಗಿದೆ,
ಹೀಗಾಗಿ ಪ್ರತಿ ಯೂನಿಟ್ ಗೆ ಹೆಚ್ಚುವರಿಯಾಗಿ 85 ಪೈಸೆ ಶುಲ್ಕ ನವೆಂಬರ್ ತಿಂಗಳ ವಿದ್ಯುತ್ ಬಳಕೆಗೆ ವಸೂಲಿ ಮಾಡಲಾಗುವುದು. ಅಕ್ಟೋಬರ್ ತಿಂಗಳ ಬಳಕೆಗೆ 1.01 ರೂಪಾಯಿ ನಿಗದಿ ಮಾಡಲಾಗಿತ್ತು. ವಿದ್ಯುತ್ ಕೊರತೆಯ ಕಾರಣ ಖರೀದಿ ಪ್ರಮಾಣ ಹೆಚ್ಚಾಗಿದ್ದರಿಂದ ಇಂಧನ ಹೊಂದಾಣಿಕೆ ವೆಚ್ಚ ಹೆಚ್ಚಾಗುವ ಆತಂಕ ಉಂಟಾಗಿತ್ತು. ಆದರೆ, ಕಳೆದ ತಿಂಗಳು ಎಫ್‌ಎಸಿಗಿಂತ 0.16 ಪೈಸೆ ಕಡಿಮೆ ಆಗಿದೆ. ನವೆಂಬರ್ ತಿಂಗಳ ವಿದ್ಯುತ್ ಬಳಕೆಯ ಮೇಲೆ ಪ್ರತಿ ಯೂನಿಟ್ ಗೆ 85 ಪೈಸೆ ಹೆಚ್ಚುವರಿಯಾಗಿ ಶುಲ್ಕ ವಸೂಲಿ ಮಾಡಲಾಗುವುದು ಎನ್ನಲಾಗಿದೆ.