ಮೈಸೂರು: ರಾಜ್ಯದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ವಿದ್ಯುತ್ ದರ ಪರಿಷ್ಕರಿಸಬೇಕು. ವಿದ್ಯುತ್ ದರ ಒಮ್ಮೆ ಹೆಚ್ಚಾದರೆ ಮತ್ತೊಮ್ಮೆ ಕಡಿಮೆಯಾಗುತ್ತದೆ ಎಂದು ಇಂಧನ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, 2005 ರಲ್ಲಿ ಅಂದಿನ ಸರ್ಕಾರ ಕಲ್ಲಿದ್ದಲು ದರ ಹೊಂದಾಣಿಕೆ ಮಾಡಿದೆ. ಹಾಗಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ವಿದ್ಯುತ್ ದರ ಪರಿಷ್ಕರಿಸಲಾಗುತ್ತಿದೆ ಎಂದರು.
ನಮ್ಮ ಸರ್ಕಾರ, ನಾನು ಇಂಧನ ಸಚಿವನಾದ ಮೇಲೆ ಜಾರಿ ಮಾಡಿಲ್ಲ. ಕಳೆದ 7 ವರ್ಷಗಳಿಂದ ವಿದ್ಯುತ್ ದರ ನೀತಿ ಪರಿಷ್ಕರಣೆ ಜಾರಿಯಲ್ಲಿದೆ. ರೈತರಿಗೆ 7 ಗಂಟೆ ವಿದ್ಯುತ್ ನೀಡುವುದು ನಿಶ್ಚಿತ. ಬಿಜೆಪಿ ಅವಧಿಯಲ್ಲಿ 6 ಲಕ್ಷ ರೈತರಿಗೆ ಹೊಸದಾಗಿ ವಿದ್ಯುತ್ ಸಂಪರ್ಕ ನೀಡಲಾಗಿದೆ ಎಂದು ತಿಳಿಸಿದ್ದಾರೆ.