
ಬೆಳಗಾವಿ: ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ವಿದ್ಯುತ್ ಪ್ರವಹಿಸಿ ಅಜ್ಜಿ, ಮೊಮ್ಮಗ ಸಾವನ್ನಪ್ಪಿದ್ದಾರೆ.
70 ವರ್ಷದ ಶಾಂತಮ್ಮ, 25 ವರ್ಷದ ಸಿದ್ಧಾರ್ಥ ಮೃತಪಟ್ಟವರು ಎಂದು ಹೇಳಲಾಗಿದೆ. ಮನೆ ಹಿತ್ತಲಿನಲ್ಲಿ ಅಜ್ಜಿ ಬಟ್ಟೆ ಒಣಗಿ ಹಾಕುವಾಗ ತಂತಿಗೆ ಕೈಗೆ ತಾಗಿ ಕರೆಂಟ್ ಶಾಕ್ ಹೊಡೆದಿದ್ದು, ಅವರನ್ನು ರಕ್ಷಿಸಲು ಸಿದ್ದಾರ್ಥ್ ದೌಡಾಯಿಸಿ ಬಂದಿದ್ದು, ಈ ವೇಳೆ ವಿದ್ಯುತ್ ಪ್ರವಹಿಸಿ ಇಬ್ಬರು ಮೃತಪಟ್ಟಿದ್ದಾರೆನ್ನಲಾಗಿದೆ. ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.