alex Certify ಪಡಿತರ ಚೀಟಿ ಹೊಂದಿದ ಗ್ರಾಮೀಣ ಜನತೆಗೆ ಸಿಹಿ ಸುದ್ದಿ, ‘ಬೆಳಕು’ ಯೋಜನೆಯಡಿ ಬಡವರ ಮನೆಗೆ ವಿದ್ಯುತ್ ಸೌಲಭ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಡಿತರ ಚೀಟಿ ಹೊಂದಿದ ಗ್ರಾಮೀಣ ಜನತೆಗೆ ಸಿಹಿ ಸುದ್ದಿ, ‘ಬೆಳಕು’ ಯೋಜನೆಯಡಿ ಬಡವರ ಮನೆಗೆ ವಿದ್ಯುತ್ ಸೌಲಭ್ಯ

ಬೆಂಗಳೂರು: ರೇಷನ್ ಕಾರ್ಡ್ ಇದ್ರೇ ಸಾಕು, ನಿರಾಕ್ಷೇಪಣಾ ಪತ್ರ(NOC) ಇಲ್ಲದೆ ಗ್ರಾಮೀಣ ಪ್ರದೇಶದ ಬಡವರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು.

ಇಂಧನ ಸಚಿವ ವಿ. ಸುನಿಲ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ಪಡಿತರ ಚೀಟಿ ಆಧಾರದ ಮೇಲೆ ನಿರಾಕ್ಷೇಪಣಾ ಪತ್ರ ಇಲ್ಲದೆ ಗ್ರಾಮೀಣ ಭಾಗದಲ್ಲಿ ಬಡವರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತದೆ. ಸುಮಾರು 3 ಲಕ್ಷ ಮನೆಗಳಿಗೆ ಮುಂದಿನ 100 ದಿನಗಳೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ಬಿಪಿಎಲ್ ಅಥವಾ ಎಪಿಎಲ್ ಪಡಿತರ ಚೀಟಿ ಇದ್ದರೆ ಸಾಕು, ಅವರಿಗೆ ವಿದ್ಯುತ್ ಸಂಪರ್ಕ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಅನೇಕ ಬಡವರು ಮನೆ ಕಟ್ಟಿಕೊಂಡಿದ್ದರೂ, ವಿದ್ಯುತ್ ಸಂಪರ್ಕ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ‘ಬೆಳಕು’ ಯೋಜನೆಯ ಮೂಲಕ ಎನ್ಒಸಿ ಇಲ್ಲದೇ ರೇಷನ್ ಕಾರ್ಡ್ ಆಧರಿಸಿ ಎಲ್ಲರಿಗೂ ವಿದ್ಯುತ್ ಸಂಪರ್ಕ ನೀಡಲಾಗುವುದು ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...