ಧಾರವಾಡ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ 110/11 ಕೆ.ವಿ ಯುಎಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಆ.22 ರಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇವರು 2ನೇ ತ್ರೈಮಾಸಿಕ ತುರ್ತುಪಾಲನಾ ಕಾಮಗಾರಿಯನ್ನು ಕೈಗೊಳ್ಳಲಿದೆ.
ಸದರಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎಲ್ಲಾ 11ಕೆವಿ ಮಾರ್ಗಗಳಲ್ಲಿ ಆಗಸ್ಟ್ 22 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಎತ್ತಿನಗುಡ್ಡ, ಅಗ್ರಿ ಯೂನಿವರ್ಸಿಟಿ ಕ್ಯಾಂಪಸ್, ಕುಮಾರೇಶ್ವರ ನಗರ, ಸೈದಾಪೂರ, ಬೆಳಗಾವಿ ಮೇನ್ ರೋಡ್, ನಾರಾಯಣಪುರ, ಸಿಐಟಿಬಿ, ಕೆಹೆಚ್‍ಬಿ ಕಾಲೋನಿ, ಸಂಪಿಗೆ ನಗರ, ತಾವರಗೇರಿ ಹಾಸ್ಪಿಟಲ್, ಸನ್ಮತಿ ನಗರ, ಜಿಟಿಸಿ ಕ್ಯಾಂಪಸ್, ಮೆಹಬೂಬ್ ನಗರ, ಹಶ್ಮಿ ನಗರ, ಮಾಳಾಪುರ, ಏರಟೆಕ್, ಜಯಲಕ್ಷ್ಮಿ ಇಂಡಸ್ಟ್ರೀಸ್, ಬಸವ ಕಾಲೋನಿ, ಪವರ್ ಗ್ರಿಡ್, ಪೆಪ್ಸಿ, ಕಿಲ್ಲಾ, ಸಾದುನವರ ಎಸ್ಟೇಟ್, ನರೇಂದ್ರ, ಮಮ್ಮಿಗಟ್ಟಿ, ಚಿಕ್ಕಮಲ್ಲಿಗವಾಡ, ಹಿರೇಮಲ್ಲಿಗವಾಡ, ಶಿರಡಿ ನಗರ, ರಾಜನಗರ, ಬಿಎಸ್‍ಕೆ ಲೇಔಟ್, ಮಾಳಾಪುರ ಲಾಸ್ಟ್ ಬಸ್ ಸ್ಟಾಪ್, ರಾಜನಗರ, ತಮದಂಡಿ ಪ್ಲಾಟ್, ಎಪಿಎಮ್‍ಸಿ, ಫೈರ್ ಸ್ಟೇಷನ್, ರಾಮನಗೌಡ ಹಾಸ್ಪಿಟಲ್, ದುರ್ಗಾದೇವಿ ದೇವಸ್ಥಾನ, ಮರಾಠ ಕಾಲೋನಿ, ಕೊಪ್ಪದ ಕೇರಿ, ಗುಲಗಂಜಿಕೊಪ್ಪ, ಎಂ.ಬಿ. ನಗರ, ಸಿವಿಲ್ ಹಾಸ್ಪಿಟಲ್, ನಿತಿನ್ ನಗರ, ಓಲ್ಡ್ ಎಸ್‍ಪಿ ಸರ್ಕಲ್, ಲಕ್ಷ್ಮಿ ಗುಡಿಯ ಸುತ್ತಮುತ್ತಲಿನ ಪ್ರದೇಶ, ಪೊಲೀಸ್ ಹೆಡ್ ಕ್ವಾಟರ್ಸ್ ಪ್ರದೇಶ, ಬೇಂದ್ರೆ ನಗರ ಮತ್ತು ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.