
ಧಾರವಾಡ: ವಿದ್ಯುತ್ ತಂತಿಗೆ ಮತ್ತೋರ್ವ ರೈತ ಬಲಿಯಾಗಿದ್ದಾರೆ. ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತರೊಬ್ಬರು ಸಾವನ್ನಪ್ಪಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ನಡೆದಿದೆ.
ಮಹದೇವಪ್ಪ ಹಂಕರಗಿ (63) ಮೃತ ದುರ್ದೈವಿ. ಕಬ್ಬಿನಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ ಪಂಪ್ ಸೆಟ್ ಅಳವಡಿಸಲು ಹೋಗಿದ್ದಾಗ ಈ ಘಟನೆ ನಡೆದಿದೆ.
ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯಿಂದ ವಿದ್ಯುತ್ ಪ್ರವಹಿಸಿದ್ದು, ಅದನ್ನು ತುಳಿದ ರೈತ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.