ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ದಿನ ದಿನಕ್ಕೂ ಕ್ರಾಂತಿಕಾರಕ ಬದಲಾವಣೆ ಕಾಣಿಸುತ್ತಿದೆ. ಪೆಟ್ರೋಲಿಯಂ ಇಂಧನದ ಮೇಲಿನ ಅವಲಂಬನೆ ಕಡಿಮೆ ಮಾಡುವುದು ಮತ್ತು ಪರಿಸರ ಕಾಳಜಿಯ ಕಾರಣಕ್ಕೆ ಈ ಕ್ಷೇತ್ರಕ್ಕೆ ಪ್ರಾತಿನಿಧ್ಯ ಸಿಗುತ್ತಿದೆ.
ಇದೇ ವೇಳೆಗೆ ವೋಲ್ವೋ ಒಂದು ಅಧ್ಯಯನ ನಡೆಸಿ ಜಗತ್ತಿಗೆ ಅಚ್ಚರಿ ಮತ್ತು ಎಚ್ಚರಿಕೆ ಮಾಹಿತಿ ನೀಡಿದೆ.
ಸಾಂಪ್ರದಾಯಿಕ ಎಂಜಿನ್ (ICE) ವಾಹನಗಳ ಉತ್ಪಾದನೆಗೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನಗಳ ತಯಾರಿಕೆಯು 70 ಪ್ರತಿಶತ ಹೆಚ್ಚು ಎಮಿಷನ್ ಹೊರಸೂಸಲಿದೆ ಎಂದು ಅಧ್ಯಯನದಲ್ಲಿ ಗೊತ್ತಾಗಿದೆ.
ಸ್ವೀಡಿಷ್ ಆಟೋ ಮೇಕರ್ ವೋಲ್ವೊ ತನ್ನ ಅಧ್ಯಯನದಲ್ಲಿ ಸಾಂಪ್ರದಾಯಿಕ ಉರಿಯುವ ಇಂಧನ (ಫಾಸಿಲ್ ಫ್ಯೂಯಲ್) ಬಳಸುವ ಎಕ್ಸ್ ಸಿ 40 ಎಸ್ ಯುವಿ ಮತ್ತು ಸಿ40 ರೀಚಾರ್ಜ್ ಅನ್ನು ಬಳಸಿತ್ತು.
ವಿವಿಧ ಮಾಪನಗಳ ಮೂಲಕ ಎರಡೂ ಮಾದರಿಗಳ ಅಧ್ಯಯನ ನಡೆಸಿ 43 ಪುಟಗಳ ವರದಿ ತಯಾರಿಸಿದೆ. ಒಟ್ಟಾರೆ ಉತ್ಪಾದನಾ ಪ್ರಕ್ರಿಯೆಯಲ್ಲಿ ಇವಿ ವಾಹನದ ತಯಾರಿಕೆ ಹೆಚ್ಚಿನ ಹೊರಸೂಸುವಿಕೆಗೆ ಕಾರಣವಾಗಿದೆ.